ಹೊಸನಗರ ; ಹೊಸನಗರ ತಹಸೀಲ್ದಾರ್ ರಶ್ಮಿ ಹಾಲೇಶ್ ರವರನ್ನು ವರ್ಗಾವಣೆಗೊಳಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.


ಸಾಗರ ತಾಲ್ಲೂಕಿನ ತಹಸೀಲ್ದಾರ್ ಆಗಿದ್ದ ಚಂದ್ರಶೇಖರ್ ನಾಯಕ್ ಅವರ ಜಾಗಕ್ಕೆ ರಶ್ಮಿ ಅವರನ್ನು ನೇಮಕ ಮಾಡಲಾಗಿದೆ. ಚಂದ್ರಶೇಖರ್ ನಾಯಕ್ ಅವರಿಗೆ ಸ್ಥಳ ತೋರಿಸದೆ ಅವರನ್ನು ಸ್ಥಳ ನಿರೀಕ್ಷೆಯಲ್ಲಿ ಇರಿಸಲಾಗಿದೆ.

ರಶ್ಮಿ 2023ರ ನ. 08 ರಂದು ಹೊಸನಗರ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇನ್ನೂ ಹೊಸನಗರಕ್ಕೆ ನೂತನ ತಹಸೀಲ್ದಾರ್ ಯಾರು ಎಂಬುದು ಸ್ಪಷ್ಟವಾಗಿಲ್ಲ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

