HOSANAGARA ; ಬಸ್ ನಿಲ್ದಾಣದ ಮಳಿಗೆಗಳ ಬಿಡ್‌ದಾರರು ನಾನಾ ಕಾರಣ ಹೇಳಿ ಅಂಗಡಿಗಳನ್ನು ಬಿಟ್ಟರೆ ಬೀಳಲಿದೆಯೇ ಭಾರಿ ದಂಡ !?

Written by malnadtimes.com

Published on:

HOSANAGARA ; ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣದ ಹೋಟೆಲ್ ಹಾಗೂ 11 ಅಂಗಡಿ ಮಳಿಗೆಗಳನ್ನು ಅಕ್ಟೋಬರ್ 28ರಂದು ಪಟ್ಟಣ ಪಂಚಾಯತಿ ಆವರಣದಲ್ಲಿ 25 ಸಾವಿರ ಡಿ.ಡಿಯೊಂದಿಗೆ ಹರಾಜು ಪ್ರಕ್ರಿಯೆ ನಡೆದಿದ್ದು ಹೋಟೆಲ್ 1.86 ಲಕ್ಷ ರೂ. ಪ್ರತಿ ತಿಂಗಳುಗಳ ಬಾಡಿಗೆ ಹಾಗೂ ಕೆಲವು ಮಳಿಗೆಗಳು 26 – 28 ಸಾವಿರ ರೂ. ಗಳಿಗೆ ಕೆಲವರು ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಕರೆದಿದ್ದು ಒಟ್ಟು 11 ಮಳಿಗೆಯಿಂದ ಪ್ರತಿ ತಿಂಗಳು 2.70 ಲಕ್ಷ ಹಾಗೂ ಬಸ್ ಸ್ಟ್ಯಾಂಡ್ ಹೋಟೆಲ್ ಒಂದರಿಂದ 1.86 ಲಕ್ಷ ಬಾಡಿಗೆ ಬರುತ್ತಿರುವುದರಿಂದ ಪಟ್ಟಣ ಪಂಚಾಯಿತಿಗೆ ಭಾರಿ ಆದಾಯ ಬರುತ್ತದೆ. ಇದರಿಂದ ಪಟ್ಟಣ ಪಂಚಾಯತಿ ಕಾಮಗಾರಿಗೆ ಹಾಗೂ ನೌಕರರಿಗೆ ಸಂಬಳ ಕೊಡಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಹಾಗೂ ನೌಕರ ವರ್ಗ ಸಂತೋಷಗೊಂಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮುಂದೇನು?

ಪಟ್ಟಣ ಪಂಚಾಯತಿ ವ್ಯಾಪ್ತಿಯ 11 ಮಳಿಗೆಗಳು ಹರಾಜಾಗಿದೆ. ಹೋಟೆಲ್ ದಾಖಲೆಯ ಪ್ರಮಾಣದಲ್ಲಿ ಹರಾಜಾಗಿದೆ ಆದರೆ ಹೋಟೆಲ್ ಬಿಡ್‌ದಾರರು ಕೆಲವು ಮಳಿಗೆಗಳನ್ನು ಹಿಡಿದವರು ಡಿಪಾಸಿಟ್ ಕಟ್ಟಿ ಹೋಟೆಲ್ ಮತ್ತು ಅಂಗಡಿಗಳನ್ನು 12 ವರ್ಷಗಳ ಕಾಲ ಈ ಬಾಡಿಗೆಯಲ್ಲಿ ಹೋಟೆಲ್ ಅಂಗಡಿ ನಡೆಸುತ್ತಾರೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಯಾಗಿ ಉಳಿದಿದೆ.

ಬಿಡ್‌ದಾರರು ಹೋಟೆಲ್ ಮತ್ತು ಮಳಿಗೆಯವರು ಬಿಟ್ಟರೇ ಭಾರೀ ದಂಡ ವಸೂಲಿ ?

ಅಕ್ಟೋಬರ್ 28ರಂದು ಬಹಿರಂಗ ಹರಾಜಿನಲ್ಲಿ ಬಿಡ್‌ದಾರರು ಹೋಟೆಲ್ ಹಾಗೂ ಭಾರೀ ಬೆಲೆಗೆ ಅಂಗಡಿ ಮಳಿಗೆ ಹಿಡಿದವರು ನಾನಾ ಕಾರಣ ಹೇಳಿ ಡಿಪಾಸಿಟ್ 25 ಸಾವಿರ ಹೋದರೆ ಹೋಗಲಿ ಎಂದು ಬಿಟ್ಟರೆ ಪಟ್ಟಣ ಪಂಚಾಯಿತಿ ಮುಂದೆ ಏನೂ ಮಾಡಬಹುದು? ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಮಾನ್ಯ ಜನರು ಕೇಳುವ ಪ್ರಶ್ನೆಯಾಗಿದ್ದು ಇದಕ್ಕೆ ಉತ್ತರ ಇಲ್ಲಿದೆ.

ಅಕ್ಟೋಬರ್ 28ರಂದು ಹರಾಜು ಪ್ರಕ್ರಿಯೆ ನಡೆದಿದೆ ನವೆಂಬರ್ 12ರಂದು ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆ ನಡೆಯಲಿದ್ದು ಸಭೆಯಲ್ಲಿ ಚರ್ಚಿಸಿ ನಂತರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಳುಹಿಸಲಾಗುತ್ತದೆ. ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳಿಂದ ಹಣ ಕಟ್ಟಿಸಿಕೊಂಡು ಮಳಿಗೆಯನ್ನು 12 ವರ್ಷಗಳ ಕಾಲ ಅಧಿಕೃತವಾಗಿ ಬಾಡಿಗೆ ಒಪ್ಪಿಗೆ ಪತ್ರ ಸಿಗಲಿದೆ. ಹೋಟೆಲ್ ಮತ್ತು ಅಂಗಡಿ ಮಳಿಗೆಯ ಬಿಡ್‌ದಾರರು 7 ದಿನಗಳ ಒಳಗೆ ಪಟ್ಟಣ ಪಂಚಾಯತಿ ಸೂಚಿಸಿದ ಡಿಪಾಸಿಟ್ ಹಣವನ್ನು ಡಿ.ಡಿ ಮೂಲಕ ಕಟ್ಟಿ ಅಂಗಡಿಗಳನ್ನು ಅವರ ಹೆಸರಿಗೆ ಲೈಸೆನ್ಸ್ ಪಡೆಯಬೇಕು ಎಂಬ ಸೂಚನೆ ನೀಡುತ್ತಾರೆ.

ಮುಂದೆ ನಡೆಯುವುದೇ ಹಬ್ಬ :

ನಿಜವಾಗಿಯೂ ಅಂಗಡಿ ಹೋಟೆಲ್‌ಗಳನ್ನು ಮಾಡುವವರು ಯಾರು ಈ ಬಾಡಿಗೆಗೆ ಹರಾಜಿನಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೂ ದುಬಾರಿ ಬೆಲೆಗೆ ಕರೆದಿದ್ದಾರೆ. ಬಿಡ್‌ದಾರರು 7 ದಿನಗಳ ಒಳಗೆ ಡಿಪಾಸಿಟ್ ಹಣ ಕಟ್ಟಿ ಅಂಗಡಿ ಲೈಸೆನ್ಸ್ ಪಡೆಯಬೇಕು ಪಡೆಯದಿದ್ದರೆ ಮುಂದೇನು? ಎಂಬ ಪ್ರಶ್ನೆಯನ್ನು ಅಧಿಕಾರಿಗಳ ಬಳಿ ಕೇಳಿದಾಗ ಅವರಿಂದ ಈ ಉತ್ತರ ಬಂದಿದ್ದು ಕೇಳಿದರೇ ಮೈ ಝುಂ ಎನ್ನುತ್ತಿದೆ.

ಬಿಡ್‌ದಾರರು ನಾನಾ ಕಾರಣ ಹೇಳಿ ತಪ್ಪಿಸಿಕೊಂಡರೆ ಅವರು ಮುಂಗಡವಾಗಿ 25 ಸಾವಿರ ರೂ. ನೀಡಿರುವ ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಂತರ ಟೆಂಡರ್ ಪ್ರಕ್ರಿಯೆ ಮುಂದುವರೆಸಿ ಯಾರು ಬಿಟ್ಟಿದ್ದಾರೆ ಎಂಬ ಮಳಿಗೆಯನ್ನು ಗುರುತಿಸಿ ಮರು ಹರಾಜು ಮಾಡಲಾಗುವುದು ಮರು ಹರಾಜಿನಲ್ಲಿ ಈ ಹಿಂದೆ ಹಿಡಿದ ಹರಾಜಿಗಿಂತ ಹೆಚ್ಚು ಹಣಕ್ಕೆ ಮಳಿಗೆ ಹೋಟೆಲ್ ಹರಾಜಾದರೇ ಯಾವುದೇ ಚಿಂತೆಯಿಲ್ಲ. ಹಿಂದೆ ಹಿಡಿದ ಹರಾಜಿಗಿಂತ ಕಡಿಮೆಗೆ ಹರಾಜಾದರೆ ಹಿಂದೆ-ಮುಂದೆ ಹಿಡಿದ ಹಣವನ್ನು ಅಂದರೆ (ಹಿಂದೆ 28 ಸಾವಿರ ರೂ.ಗಳಿಗೆ ಮಳಿಗೆ ಹರಾಜಾಗಿದ್ದು ಈಗ 18 ಸಾವಿರಕ್ಕೆ ಹರಾಜಿನಲ್ಲಿ ಹಿಡಿದರೆ ಡಿಪರೆನ್ಸ್ 10 ಸಾವಿರ ಹಣ) ಉಳಿದ ಡಿಪರೆನ್ಸ್ ಹಣ ಪ್ರತಿ ತಿಂಗಳು ಕಟ್ಟುವುದರ ಜೊತೆಗೆ 12 ವರ್ಷ ದಂಡ ರೂಪದಲ್ಲಿ ಪಟ್ಟಣ ಪಂಚಾಯಿತಿಗೆ ಕಟ್ಟಬೇಕು. ಇಲ್ಲವಾದರೆ ಕ್ರಿಮಿನಲ್ ಕೇಸ್ ಜೊತೆಗೆ ಅಧಿಕಾರಿಗಳ ಆಡಳಿತ ಮಂಡಳಿಯ ಹಾಗೂ ಹರಾಜಿನಲ್ಲಿ ಭಾಗಿಯಾಗಿರುವವರ ಸಮಯ ವ್ಯರ್ಥ ಮಾಡಿರುವ ಬಗ್ಗೆ ಕೇಸ್ ಹಾಕಲಿದ್ದಾರೆ ಎಂದು ಹೇಳಲಾಗಿದೆ.

ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಸ್ ಸ್ಟ್ಯಾಂಡ್ ಮಳಿಗೆ ಹೋಟೆಲ್‌ಗಳನ್ನು ಬಿಡ್‌ದಾರರು ಓಪನ್ ಮಾಡಿದರೆ ಸಂತೋಷ, ಇಲ್ಲವಾದರೆ ಹೊಸನಗರ ಬಸ್ ಸ್ಟ್ಯಾಂಡ್‌ಗೆ ಒಂದು ಕಳಂಕವಾಗಲಿದೆ‌.

Leave a Comment