ವಿದ್ಯುತ್‌ ಮಾರ್ಗ ದುರಸ್ಥಿ ವೇಳೆ ಕರೆಂಟ್ ಶಾಕ್, ಕಾರ್ಮಿಕನ ಸ್ಥಿತಿ ಗಂಭೀರ !

Written by malnadtimes.com

Published on:

HOSANAGARA | ಮೆಸ್ಕಾಂ (Mescom) ವಿದ್ಯುತ್ ಲೈನ್ (Current Line) ನಿರ್ವಹಣೆ ವೇಳೆ ಇದ್ದಕ್ಕಿದ್ದಂತೆ ಆಫ್ ಆಗಿದ್ದ ವಾಸು ಪೂಜಾರಿ ಲೈನ್ ಚಾರ್ಜ್ ಆದ ಪರಿಣಾಮ ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರದ ಬೈಸೆ ಸಮೀಪ ನಡೆದಿದೆ.

WhatsApp Group Join Now
Telegram Group Join Now
Instagram Group Join Now

Read More :ಅಪಘಾತಗೊಂಡು ರಸ್ತೆ ಮೇಲೆ ಉರುಳಿ ಬಿದ್ದ ಲಾರಿ, ಸಂಚಾರ ಅಸ್ತವ್ಯಸ್ಥ

ಹೊಸನಗರ ಕ್ರಿಶ್ಚಿಯನ್ ಕಾಲೋನಿ ನಿವಾಸಿ ವಾಸುಪೂಜಾರಿ ಗಂಭೀರ ಗಾಯಗೊಂಡ ಕಾರ್ಮಿಕ. ವಿದ್ಯುತ್ ಶಾಕ್‌ನಿಂದ ದೇಹ ಬಹುಪಾಲು ಸುಟ್ಟು ಹೋಗಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೇಗಾಯ್ತು ಘಟನೆ ?

ಬೈಸೆ ಸಮೀಪ ವಿದ್ಯುತ್‌ ಲೈನ್‌ಗೆ ತಾಗಿದ ಮರದ ಕವಲುಗಳ ತೆರವುಗೊಳಿಸುವ ಮುಂಚಿತವಾಗಿ ಹುಲಿಕಲ್-ಬ್ಯಾಕೋಡು ವಿದ್ಯುತ್ ಲೈನ್‌ ಎಲ್.ಸಿ. ಪಡೆದುಕೊಳ್ಳಲಾಗಿತ್ತು. ಅಲ್ಲದೆ ಸ್ಥಳದಲ್ಲೇ ಬ್ಯಾಕೋಡು ಇಂಜಿನಿಯರ್ ಗಣೇಶ್, ಮೇಸ್ತ್ರಿ ವಿಜಯಕುಮಾರ್ ಸಹ ಮೊಕ್ಕಾಂ ಹೂಡಿದ್ದರು. ಈ ನಡುವೆ ಏಕಾಏಕಿ ಲೈನ್ ಚಾರ್ಜ್ ಆಗಿದ್ದರಿಂದ ಅವಘಡ ನಡೆದಿದೆ. ಇದಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.

ಮೂವರು ಬಲಿ !

ಹೊಸನಗರದಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ. 5 ವರ್ಷದಲ್ಲಿ ಮೂರು ಜೀವಗಳು ಹಾರಿಹೋಗಿವೆ. ಕರಿನಗೊಳ್ಳಿ, ಮಾರುತಿಪುರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಇನ್ನೊಂದು ಪ್ರಕರಣದಲ್ಲಿ ಲೈನ್‌ಮನ್ ರತನ್ ಜೀವ ತೆತ್ತಿದ್ದರು. ಹೀಗೆ ಕಾರ್ಮಿಕರು ಬಲಿಯಾಗುತ್ತಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಮೆಸ್ಕಾಂ ವಿಫಲವಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Read More:ಎರಡು ಪ್ರತ್ಯೇಕ ಘಟನೆ, ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು !

Leave a Comment