ಹೊಸನಗರ ; ಪಟ್ಟಣದಲ್ಲಿ ಸುಮಾರು 60 ವರ್ಷಗಳ ಕಾಲ ಬಸ್ ನಿಲ್ದಾಣದಲ್ಲಿ ಅಂಗಡಿ ನಡೆಸಿ ಬಸ್ ಸ್ಟ್ಯಾಂಡ್ ಅಂಗಡಿ ಗಣಪತಿಯೆಂದು ಚಿರಪರಿಚಿತರಾದ ಗಣಪತಿ ಶೇಟ್ (79) ಗುರುವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು.
ಮೃತರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಸಂತಾಪ ;
ಗಣಪತಿ ಶೇಟ್ ನಿಧನಕ್ಕೆ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಹೆಚ್. ವಸಂತ, ಚಂದ್ರಶೇಖರ್ ಶೇಟ್, ರವಿ ಶೇಟ್, ಮಿಲ್ ಈಶ್ವರಪ್ಪ ಗೌಡ, ಜಿ.ಟಿ ಈಶ್ವರಪ್ಪ ಗೌಡ, ಹತ್ವಾಲ್ ಮುರುಳಿಧರ, ಹೆಚ್ ಶ್ರೀನಿವಾಸ್, ಗೌತಮ್ ಕುಮಾರಸ್ವಾಮಿ, ಕುಂದಾಪುರದ ಉದಯಕುಮಾರ್ ಹಾಗೂ ಕೊಡಚಾದ್ರಿ ಅಡಿಕೆ ಮಂಡಿಯ ಎಲ್ಲಾ ಸಿಬ್ಬಂದಿಗಳು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.