HOSANAGARA ; ತಾಲೂಕಿನ ಮಾರುತಿಪುರದಲ್ಲಿ ನಡೆದ 15 ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಮಲೆನಾಡು ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಶಸ್ತಿಗಳ ಸಿಂಹಪಾಲನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದ ಗುಂಪು ಸ್ಪರ್ಧೆಗಳಲ್ಲಿ ಮಲೆನಾಡು ಪ್ರೌಢಶಾಲೆ ಬಾಲಕಿಯರು ಕಬಡ್ಡಿ ಹಾಗೂ ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ವಾಲಿಬಾಲ್ ಹಾಗೂ ಖೋಖೋಗಳಲ್ಲಿ ದ್ವಿತೀಯ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಿಲೆ ಸ್ಪರ್ಧೆಯಲ್ಲಿ ಸುಷ್ಮಾ, ರಶ್ಮಿ, ನಾಗಶ್ರೀ, ಮೇಘನಾ ಪ್ರಥಮ ಸ್ಥಾನವನ್ನು ತ್ರಿವಿಧ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ಮೇಘನಾ ಪ್ರಥಮ ಸ್ಥಾನವನ್ನು, ಎತ್ತರ ಜಿಗಿತದಲ್ಲಿ ಸುಷ್ಮಾ ಪ್ರಥಮ ಸ್ಥಾನವನ್ನು, 1500 ಮೀಟರ್ ಓಟದಲ್ಲಿ ಕೋಮಲಾ ಪ್ರಥಮ ಸ್ಥಾನವನ್ನು, ಥ್ರೋಬಾಲ್ ನಲ್ಲಿ ಸುಷ್ಮಾ ಪ್ರಥಮ ಸ್ಥಾನವನ್ನು, 800 ಮೀಟರ್ ಓಟದಲ್ಲಿ ಭೂಮಿಕಾ ಪ್ರಥಮ ಸ್ಥಾನವನ್ನು, 100 ಮೀಟರ್ ಓಟದಲ್ಲಿ ಸುಷ್ಮಾ ಪ್ರಥಮ ಸ್ಥಾನವನ್ನು, ನಡಿಗೆ ಸ್ಪರ್ಧೆಯಲ್ಲಿ ನೇಹ ದ್ವಿತೀಯ ಸ್ಥಾನವನ್ನು, 3000 ಮೀಟರ್ ಓಟದಲ್ಲಿ ಅರ್ಚನಾ ದ್ವಿತೀಯ ಸ್ಥಾನವನ್ನು, 200 ಮೀಟರ್ ಓಟದಲ್ಲಿ ಮೇಘನಾ ತೃತೀಯ ಸ್ಥಾನವನ್ನು, 4X400 ಮೀಟರ್ಸ್ ಓಟದಲ್ಲಿ ಮೇಘಾ, ಭುವಿತಾ, ಪ್ರಾರ್ಥನಾ ಮತ್ತು ಅಂಕಿತ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಈ ಬಾರಿ ಮಳೆ ನಡುವೆ ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಕ್ರೀಡಾ ಶಿಕ್ಷಕರನ್ನು ಹಾಗೂ ತರಬೇತಿದಾರರ ತಂಡದ ಭರತ್, ಅಖಿಲೇಶ್, ಶರತ್, ಪ್ರದೀಪ್, ಸುಧಾಕರ, ಮಹೇಶ ರವರನ್ನು ಅಭಿನಂದಿಸಿದ್ದಾರೆ
ಮಲೆನಾಡು ಪ್ರೌಢಶಾಲೆ ವಿದ್ಯಾರ್ಥಿಗಳು ಶಾಲಾ ಶಿಕ್ಷಕರುಗಳು ತರಬೇತಿದಾರರು ಸಮಗ್ರ ಪ್ರಶಸ್ತಿಗಳನ್ನು ಬಾಚಿಕೊಂಡು ಬಂದಿದ್ದಕ್ಕಾಗಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.