ಹೊಸನಗರ ; ವಿದ್ಯುತ್ ಸಮಸ್ಯೆ ಖಂಡಿಸಿ ಮನವಿ ಪತ್ರ ಸಲ್ಲಿಕೆ

Written by malnadtimes.com

Published on:

ಹೊಸನಗರ ; ತಾಲ್ಲೂಕಿನಲ್ಲಿ ಪದೇ-ಪದೇ ವಿದ್ಯುತ್ ನಿಲುಗಡೆ ಹಾಗೂ ವೋಲ್ಟೇಜ್ ಇಲ್ಲದೆ ಉಪಕರಣಗಳು ಹಾಳಾಗುತ್ತಿದ್ದು ತಕ್ಷಣ ಪದೇ-ಪದೇ ವಿದ್ಯುತ್ ನಿಲುಗಡೆ ತಡೆಯಬೇಕು ಹಾಗೂ ತಾಲ್ಲೂಕಿನ ಹೈವೋಲ್ಟೇಜ್ ವಿದ್ಯುತ್ ನೀಡದಿದ್ದರೆ ಹೊಸನಗರ ಸ್ಪೋಟ್ಸ್ ಅಸೋಸಿಯೇಶನ್ ಕ್ಲಬ್ ನೇತೃತ್ವದಲ್ಲಿ ತಾಲ್ಲೂಕಿನ ರೈತರನ್ನು ಒಂದು ಮಾಡಿಕೊಂಡು ಮೆಸ್ಕಾ ಇಲಾಖೆಯ ಮುಂಭಾಗ ಉಗ್ರ ಹೋರಾಟ ನಡೆಸುವುದಾಗಿ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಜಿ.ಎಸ್. ಅನಂತರಾವ್‌ ಮೆಸ್ಕಾಂ ಇಲಾಖೆಗೆ ಎಚ್ಚರಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now


ಹೊಸನಗರ ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್ ವತಿಯಿಂದ ಮೆಸ್ಕಾಂ ಸಹಾಯಕ ಇಂಜಿನಿಯರ್ ಚಂದ್ರಶೇಖರ್‌ರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಹೊಸನಗರ ತಾಲ್ಲೂಕಿನ ಜನತೆಗೆ ಈಗಾಗಲೇ ಗುಣಮಟ್ಟದ ವಿದ್ಯುತ್ ಇಲ್ಲವಾಗಿದೆ. ಇದರಿಂದ ಸಾರ್ವಜನಿಕರಿಗೆ ರೈತರಿಗೆ ಮತ್ತು ವರ್ತಕರಿಗೆ ವಿದ್ಯುತ್ ಬಳಕೆ ಯಂತ್ರಗಳು ವೋಲ್ಟೇಜ್ ಸಮಸ್ಯೆಯಿಂದ ಹಾನಿಯಾಗುತ್ತಿದ್ದು ಭಾರಿ ನಷ್ಟ ಉಂಟಾಗುತ್ತಿದೆ. ಈ ವಿಷಯವಾಗಿ ಮೆಸ್ಕಾಂ ಇಲಾಖೆಯ ಗಮನಕ್ಕೆ ಈಗಾಗಲೇ ತರಲಾಗಿದ್ದರೂ  ಪರಿಹಾರದ ಬಗ್ಗೆ ಕ್ರಮವಿಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ತಾವು ಈ ವಿಷಯವಾಗಿ ಗಮನ ಹರಿಸದಿದ್ದರೆ ಮುಂದೆ ನಮ್ಮ ಸಂಘ ಹಾಗೂ ರೈತರ ಹಾಗೂ ಸಾರ್ವಜನಿಕರೊಂದಿಗೆ ಹೋರಾಟದ ಹೆಜ್ಜೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಸ್ಪೋಟ್ಸ್ ಕ್ಲಬ್ ಉಪಾಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ಬಿ.ಎಂ.ಶ್ರೀಧರ, ಖಜಾಂಚಿ ಎಂ.ಪಿ ಸುರೇಶ್, ಬಿ.ಎಸ್.ಸುರೇಶ್, ಎನ್.ವಿ ಸುರೇಶ್, ಮಹೇಂದ್ರ, ವ್ಯವಸ್ಥಾಪಕ ಕಟ್ಟೆ ಸುರೇಶ್, ವರ್ತಕರ ಸಂಘದ ಕಾರ್ಯದರ್ಶಿ ಹರೀಶ್, ಸತ್ಯನಾರಾಯಣ, ವರ್ತಕರ ಸಂಘದ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment