ಹೊಸನಗರ ; ಇಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ಪಿಎಸ್ಐ ಶಂಕರಗೌಡ ಪಾಟೀಲ್‌ರವರ ನೇತೃತ್ವದಲ್ಲಿ ಜನ ಜಾಗೃತಿಗಾಗಿ ಅಣಕು ಪ್ರದರ್ಶನವನ್ನು ಹೊಸನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪಾತ್ರಧಾರಿಗಳಾಗಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದು ನಿಜವಾಗಿಯೂ ಬಸ್ ನಿಲ್ದಾಣದ ಆವರಣದಲ್ಲಿ 50 ಸಾವಿರ ಹಣ ಇರುವ ಬ್ಯಾಗ್ ಕಳ್ಳತನವಾಗಿದೆ ಎಂಬ ರೀತಿಯಲ್ಲಿ ಹೊಸನಗರದಲ್ಲೆಲ್ಲಾ ಸುದ್ದಿ ಹಬ್ಬಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/161RPf9KtK/
ಜನಜಾಗೃತಿಯ ಸಾರಾಂಶ :
ರಾಜ್ಯಾದ್ಯಂತ ಬೈಕ್‌ನಲ್ಲಿ ಬಂದು ಸರ ಕಳ್ಳತನ, ಬ್ಯಾಗ್ ಕಳ್ಳತನ ಈ ರೀತಿ ಕಳ್ಳತನವಾಗುತ್ತಿದ್ದು ಹೊಸನಗರದಲ್ಲಿಯೂ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಸಿಬ್ಬಂದಿಯಾದ ಕೌಸಲ್ಯರವರು ಬ್ಯಾಗ್ ಹಿಡಿದುಕೊಂಡು ಬಸ್ ನಿಲ್ದಾಣದ ಮುಂಭಾಗ ನಿಂತಿರುವ ಹಾಗೇ ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ಗೋಪಾಲಕೃಷ್ಣ ಹಾಗೂ ಶಿವರಾಜ್‌ರವರು ಬೈಕ್‌ನಿಂದ ಬಂದು ಮುಂಭಾಗದಲ್ಲಿ ನಿಲ್ಲಿಸಿ ಒಬ್ಬರು ಬೈಕ್‌ನಿಂದ ಇಳಿದು ಬ್ಯಾಗ್ ಕಸಿದುಕೊಂಡು ಹೋಗುತ್ತಾರೆ ಅಷ್ಟು ಹೊತ್ತಿಗೆ ಹೊಸನಗರದ ಜನರು ಒಟ್ಟಾಗಿ ಸೇರಿ ಕಳ್ಳರನ್ನು ಹುಡುಕುತ್ತಾರೆ. ಅಷ್ಟು ಹೊತ್ತಿಗೆ ಕಳ್ಳರ ವೇಷದಾರಿಗಳು ಮಾವಿನಕೊಪ್ಪ ಸರ್ಕಲ್‌ಗೆ ಹೋಗಿರುತ್ತಾರೆ ಅಲ್ಲಿನ ಜನರು ಅಡ್ಡ ಹಾಕಿ ಕಳ್ಳರನ್ನು ಹಿಡಿಯುತ್ತಾರೆ. ಬ್ಯಾಗ್ ಕಳ್ಳತನವಾದ ತಕ್ಷಣ 112ಗೆ ಫೋನ್ ಮಾಡುತ್ತಾರೆ. ತಕ್ಷಣ 112 ಸಿಬ್ಬಂದಿಗಳು ಬಂದು ಕಳ್ಳತನದ ಬಗ್ಗೆ ವಿಚಾರಿಸಲಾಗಿ ಸಬ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ್‌ರವರಿಗೆ ಕಳ್ಳತನವಾದ ಬಗ್ಗೆ ಮಾಹಿತಿ ನೀಡುತ್ತಾರೆ. ಶಂಕರಗೌಡ ಪಾಟೀಲ್ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ತನಿಖೆ ಕಾರ್ಯ ನಡೆಸುತ್ತಾರೆ ತಕ್ಷಣ ಸಿಪಿಐಗೆ ಮಾಹಿತಿ ನೀಡುತ್ತಾರೆ. ಸಿಪಿಐ ಗುರಣ್ಣ ಎಸ್ ಹೆಬ್ಬಾಳ್‌ರವರ ನೇತೃತ್ವ ತಂಡ ಸ್ಥಳಕ್ಕೆ ಆಗಮಿಸಿ ಕಳ್ಳತನವಾದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಾರೆ. ತಕ್ಷಣ ತಾಲ್ಲೂಕಿನ ಎಲ್ಲ ಚೆಕ್ ಪೊಸ್ಟ್ಗಳಿಗೆ ಮಾಹಿತಿ ನೀಡುತ್ತಾರೆ. ಮಾಹಿತಿಯ ಬಗ್ಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕಳ್ಳರ ವೇಶದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ಠಾಣೆಗೆ ಕರೆತಂದು ತನಿಖೆ ನಡೆಸುತ್ತಿರುತ್ತಾರೆ. ಒಟ್ಟಾರೆ ಒಂದು ಸಿನಿಮಾ ಕಥೆಯಂತೆ ಮೂಡಿಬಂದ ಪೊಲೀಸ್ ಇಲಾಖೆಯ ಕಾರ್ಯ ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆಯಾಗಿ ಜನರಿಗೆ ಜಾಗೃತಿ ಮೂಡಿಸಿದ್ದು ಹೊಸನಗರ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳು ಅಚ್ಚುಕಟ್ಟಾಗಿ ತಮಗೆ ನೀಡಿರುವ ಪಾತ್ರವನ್ನು ನಿರ್ವಹಿಸಿದ್ದರು.