HOSANAGARA | ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಕ್ಷೀಣಿಸಿದ್ದು, ಅಣೆಕಟ್ಟೆಗೆ ಕಳೆದ 24 ಗಂಟೆಗಳಲ್ಲಿ ಮೂರೂವರೆ ಅಡಿಗಳಷ್ಟು ನೀರು ಸಂಗ್ರಹವಾಗಿದೆ.
ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಯಾವೆಲ್ಲ ಪ್ರದೇಶವಾದಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
- ಕಾರ್ಗಲ್ (ಸಾಗರ) : 41.8 ಮಿ.ಮೀ.
- ಸಾವೇಹಕ್ಲು : 34 ಮಿ.ಮೀ.
- ಚಕ್ರಾನಗರ : 30 ಮಿ.ಮೀ.
- ಹುಲಿಕಲ್ : 29 ಮಿ.ಮೀ.
- ಮಾಸ್ತಿಕಟ್ಟೆ : 28 ಮಿ.ಮೀ.
- ರಿಪ್ಪನ್‌ಪೇಟೆ ; 28 ಮಿ.ಮೀ.
- ಬಿದನೂರುನಗರ : 24 ಮಿ.ಮೀ.
- ಹೊಸನಗರ :10 ಮಿ.ಮೀ.
- ಹುಂಚ : 06 ಮಿ.ಮೀ.
- ಅರಸಾಳು : 05 ಮಿ.ಮೀ.
ಲಿಂಗನಮಕ್ಕಿಗೆ ಮೂರೂವರೆ ಅಡಿ ನೀರು :
ರಾಜ್ಯದ ಪ್ರಮುಖ ಜಲಾಶಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಗುರುವಾರ ಮಳೆ ಕ್ಷೀಣಿಸಿದರೂ ಜಲಾಶಯಕ್ಕೆ ಮೂರೂವರೆ ಅಡಿಗಳಷ್ಟು ನೀರು ಸಂಗ್ರಹವಾಗಿದ್ದು ಶುಕ್ರವಾರ ಬೆಳಗ್ಗೆ 8:00 ಗಂಟೆಗೆ ಜಲಾಶಯದ ನೀರಿನ ಮಟ್ಟ 1763.40 ಅಡಿ ತಲುಪಿದ್ದು ಜಲಾಶಯಕ್ಕೆ 44024 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಜಲಾಶಯ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ 1742.65 ಅಡಿ ದಾಖಲಾಗಿತ್ತು.
Read More
ಕಾಲುಸಂಕ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಮಹಿಳೆ ಸಾವು !
ಒಂಟಿ ಮಹಿಳೆಯರೆ ಈ ಕಾಮುಕನ ಟಾರ್ಗೆಟ್, ಗ್ರಾಮಸ್ಥರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ !
ಆಗುಂಬೆ ಭಾಗದಲ್ಲಿ ಭಾರಿ ಮಳೆ, ಕುಸಿದು ಬಿದ್ದ ಯಕ್ಷಗಾನ ಕಲಾವಿದನ ಮನೆ !