ಹೊಸನಗರ ; ಕಲ್ಲುಕ್ವಾರೆ ನೀರಿನಲ್ಲಿ ಮುಳುಗಿ ಶಾಲಾ ಬಾಲಕ ಸಾವು !

Written by malnadtimes.com

Published on:

ಹೊಸನಗರ ; ನೀರಿನಲ್ಲಿ ಮುಳುಗಿ ಬಾಲಕನೊರ್ವ ಮೃತಪಟ್ಟ ಘಟನೆ ತಾಲೂಕಿನ ಬ್ರಹ್ಮೇಶ್ವರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಮಾರುತಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಮಂತ (15) ಮೃತ ಬಾಲಕ.

ಹೇಗಾಯ್ತು ಘಟನೆ ?

ಕೂಲಿ ಕೆಲಸ ಮಾಡುವ ಮೃತನ ತಾಯಿ ಮನೆ ಸಮೀಪದ ಕಲ್ಲುಕ್ವಾರಿ ಹೊಂಡದಲ್ಲಿ ಬಟ್ಟೆ ಒಗೆದಿದ್ದಳು. ಕೆಲಸಕ್ಕೆ ಹೋಗಲು ಸಮಯವಾದ ಕಾರಣ ಒಗೆದ ಬಟ್ಟೆಯನ್ನು ಮನೆಗೆ ತಂದಿಡಲು ಮಗನಿಗೆ ತಿಳಿಸಿ ತಾಯಿ ಲಕ್ಷ್ಮಿ ಕೂಲಿ ಕೆಲಸಕ್ಕೆ ಹೋಗಿದ್ದಳು. ಸಂಜೆ ಮನೆಗೆ ಮರಳಿದಾಗ ಮಗ ಇಲ್ಲದನ್ನು ಕಂಡು ಅಕ್ಕ-ಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಹುಡುಕಾಡಿದಾಗ ಕಲ್ಲುಕ್ವಾರೆಯಲ್ಲಿ ಸಂಗ್ರಹವಾಗ ನೀರಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯರ ಆಕ್ರೋಶ :

ಕೂಲಿ ಮಾಡುತ್ತಾ ಜೀವನ ಸಾಗಿಸುವ ಮರುಗೇಶ್ ಹಾಗೂ ಲಕ್ಷ್ಮಿ ದಂಪತಿಗೆ ದಿಕ್ಕಾಗಿದ್ದ ಒಬ್ಬನೇ ಮಗ ಶಮಂತ ಅವಘಡದಲ್ಲಿ ಮೃತಪಟ್ಟಿರುವುದು ಆಘಾತ ಉಂಟುಮಾಡಿದೆ. ಅಂಬೇಡ್ಕರ್ ಕಾಲೋನಿ ಸುತ್ತಮುತ್ತ 80 ಕುಟುಂಬಗಳು ವಾಸವಿದ್ದು, ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಪರಿವರ್ತಕ ಇಲ್ಲದೇ ವೋಲ್ಟೇಜ್ ಸಮಸ್ಯೆ ಇದೆ. ಪಂಪ್‌ಗಳು ಚಾಲನೆಯಾಗುತ್ತಿಲ್ಲ. ಸಾಕಷ್ಟು ನೀರು ಸಂಗ್ರಹಿಸಲು ಸಾಧ್ಯವಾಗದ ಕಾರಣಕ್ಕೆ ಮನೆ ಸಮೀಪದ ಕಲ್ಲುಕ್ವಾರಿ ನೀರಿನಲ್ಲಿ ಬಟ್ಟೆ ತೊಳೆಯುವಂತಾಗಿದೆ. ಇದರಿಂದಾಗಿ ಬಾಲಕ ಅಲ್ಲಿಗೆ ಹೋಗಿ ನೀರಿನಲ್ಲಿ ಮುಳುಗಿ ಸಾಯುವಂತಾಯಿತು. ಮೆಸ್ಕಾಂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ವಿದ್ಯುತ್ ಸಮಸ್ಯೆ ಬಗೆಹರಿಸಿಲ್ಲ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ರುಕ್ಮಿಣಿರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment