HOSANAGARA ; ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 6,81,725 ರೂ. ನಿವ್ಹಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 15% ಡಿವಿಡೆಂಟ್ ನೀಡುವುದಾಗಿ ಸಂಘದ ಅಧ್ಯಕ್ಷರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ಘೋಷಿಸಿದರು.
ಪಟ್ಟಣದ ಆರ್ಯ ಈಡಿಗರ ಸಭಾಭವನದಲ್ಲಿ 2023-24ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರ ಸಂಘ ಯಾವುದೇ ಉತ್ತಮ ಕೆಲಸ ಮಾಡಲು ಮುಂದಾದರೆ ಅವರಿಗೆ ಸಂಪೂರ್ಣ ಸಹಕಾರ ನಾನು ನೀಡಲು ಬದ್ದನಾಗಿರುತ್ತೇವೆ. ಆದರೆ ಸಂಘದ ಯಾವುದೇ ತೀರ್ಮಾನ ಸಂಘದ ಸದಸ್ಯರ ಪರವಾಗಿದ್ದರೇ ಮಾತ್ರ ಸಂಘದ ತೀರ್ಮಾನಕ್ಕೆ ನಾನು ಬದ್ದ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪ್ಪ ಮಾತನಾಡಿ, ಈ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ 404 ಜನ ಸದಸ್ಯರಿದ್ದು ಎಲ್ಲರ ಸಹಕಾರದಿಂದ ಈ ಸಂಘವನ್ನು ಬೆಳೆಸಲು ಸಹಕಾರಿಯಾಗಿದೆ. ಕರ್ನಾಟಕ ರಾಜ್ಯದಲ್ಲಿಯೇ ನಮ್ಮ ಸಂಘವು ಬಂಡವಾಳದ ಮೇಲೆ ಉತ್ತಮ ಹೆಸರು ಪಡೆಯುವ ಪ್ರಯತ್ನದಲ್ಲಿದೆ ಈ ಮಹದಾಸೆ ಈಡೇರಿಸಲು ಸರ್ವಸದಸ್ಯರ ಸಹಕಾರ ಸೂಚನೆ ಬೇಕಾಗಿರುತ್ತದೆ ಇಲ್ಲಿಯವರೆಗೆ ನೀಡಿರುವ ಸಹಕಾರವನ್ನು ಮುಂದುವರೆಸುತ್ತಿರೆಂದು ನಂಬಿಕೆ ನಮ್ಮಲಿದೆ. ಸಂಘದ ಸಾಲ ವಸೂಲಿ ಕಾರ್ಯದಲ್ಲಿ ಸಹಕರಿಸಿದ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿಯವರ ಸಹಕಾರದಿಂದ ನಮ್ಮ ಸಂಸ್ಥೆ ಈ ಪ್ರಮಾಣದಲ್ಲಿ ಬೆಳೆಸಲು ಸಹಕಾರಿಯಾಗಿದೆ ಮುಂದಿನ ದಿನದಲ್ಲಿ ಸ್ವಂತ ಕಟ್ಟಡ ಮಾಡಿ ನಮ್ಮ ಸಭೆ ಸಮಾರಂಭವನ್ನು ಅಲ್ಲಿಯೇ ಮಾಡುವ ಯೋಜನೆ ರೂಪಿಸಲಾಗಿದ್ದು ತಮ್ಮ ಸಹಕಾರ ಅತ್ಯುಮೂಲ್ಯವಾಗಿದೆ ತಾವು ಸಹಕಾರ ನೀಡುತ್ತಿರೆಂದು ಭಾವಿಸಿರುತ್ತೇವೆ. ನಾವು ಮುಂದಿನ ದಿನದಲ್ಲಿ ಶಿಕ್ಷಕರ ಏಳಿಗೆಗಾಗಿ ಹಾಗೂ ಕಷ್ಟದಲ್ಲಿರುವ ಶಿಕ್ಷಕ ವರ್ಗದವರಿಗೆ ಸಹಕಾರ ನೀಡುವ ಬಯಕೆ ಹೊಂದಿದ್ದು ನಮ್ಮ ಸಂಸ್ಥೆ ಎಲ್ಲ ರೀತಿಯಲ್ಲಿಯೂ ಶಿಕ್ಷಕರ ಸಂಘದ ಸದಸ್ಯರ ಪರವಾಗಿ ನಿಲ್ಲುತ್ತೇವೆ ಎಂದರು.
ಈ ಸಭೆಯಲ್ಲಿ ಸಮನ್ವಯಾಧಿಕಾರಿ ರಂಗನಾಥ್ ಹಾಗೂ ಶೇಷಾಚಲ, ಪಿ.ಎಂ ಪೋಷಣ್ ಸಹಾಯಕ ನಿರ್ದೇಶಕ ಕೆ. ಬಾಲಚಂದ್ರರಾವ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ಉಪಾಧ್ಯಕ್ಷ ಅಕ್ಬರ್‌ಬಾಷ, ಹೆಚ್.ಸಿ ಶಿವಪ್ಪ, ಕಾರ್ಯದರ್ಶಿ ಪುಟ್ಟಸ್ವಾಮಿ, ಜಗದೀಶ್ ಕಾಗಿನಲ್ಲಿ, ಮಾಲತೇಶ್, ನಿರ್ದೇಶಕರಾದ ಚಂದ್ರಪ್ಪ, ಬಿ.ಎಸ್ ರಾಜು, ದೇವೆಂದ್ರಪ್ಪ, ಸುಧಾಕರ್, ಟಿ.ಎಸ್.ಮಹಾಂತೆಶ್, ಸುಜಾತ, ಫರೀದಾ, ಸುರೇಶ್ ಫಕೀರಪ್ಪ, ಮಾಲತೇಶ್ ಹಾಗೂ ಮೇಘರಾಜ್, ದಾನೇಶಪ್ಪ, ಸುಪ್ರೀತ್ ಡಿಸೋಜ, ಕುಮಾರ್ ವೈಲೇಟ್ ರಾಜಶೇಖರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹೆಚ್ಚು ಅಂಕ ಪಡೆದ ತಾಲೂಕಿನ ಶಿಕ್ಷಕರ ಮಕ್ಕಳಿಗೆ ಸನ್ಮಾನಿಸಲಾಯಿತು.