ಮಾಸ್ತಿಕಟ್ಟೆಯಲ್ಲಿ ದಾಖಲಾಯ್ತು ಅತೀ ಹೆಚ್ಚು ಮಳೆ, ಮತ್ತೆಲ್ಲೆಲ್ಲಿ ಎಷ್ಟಾಗಿದೆ ?

Written by malnadtimes.com

Published on:

HOSANAGARA | ಮಳೆ(ಲೆ)ನಾಡಿನ ತವರೂರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now

School Holidays | ಭಾರಿ ಮಳೆ ಹಿನ್ನೆಲೆ, ಶಿವಮೊಗ್ಗ ಜಿಲ್ಲಾದ್ಯಂತ ಶಾಲಾ  – ಕಾಲೇಜುಗಳಿಗೆ ಮಂಗಳವಾರ ರಜೆ

ಮಂಗಳವಾರ ಬೆಳಿಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 247 ಮಿಲಿ ಮೀಟರ್ ಅತ್ಯಧಿಕ ಮಳೆ ಸುರಿದಿದೆ.

rain

ಮತ್ತೆಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

  • ಹುಲಿಕಲ್ : 245 mm
  • ಮಾಣಿ : 240 mm
  • ಯಡೂರು : 229 mm
  • ಸಾವೇಹಕ್ಲು : 210 mm
  • ಕಾರ್ಗಲ್ (ಸಾಗರ) : 194 mm
  • ಬಿದನೂರುನಗರ : 157 mm
  • ಹೊಸನಗರ : 138 mm
  • ಹುಂಚ : 125.4 mm
  • ಅರಸಾಳು : 91.8 mm

ಲಿಂಗನಮಕ್ಕಿ ಜಲಾಶಯ :

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8:00 ಗಂಟೆಗೆ 1782.15 ಅಡಿ ತಲುಪಿದ್ದು ಜಲಾಶಯಕ್ಕೆ 77911 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ 1755.90 ಅಡಿ ದಾಖಲಾಗಿತ್ತು‌. ಸೋಮವಾರ ಒಂದೇ ದಿನ ಜಲಾಶಯಕ್ಕೆ 4 ಅಡಿಗಳಷ್ಟು ನೀರು ಹರಿದು ಜಲಾಶಯ ಶೇ. 37.47 ಭಾಗ ಭರ್ತಿಯಾಗಿದೆ. ಇಂದು ಸಹ ಪುನರ್ವಸು ಮಳೆ ಅಬ್ಬರ ತಾಲೂಕಿನಲ್ಲಿ ಮುಂದುವರೆದಿದೆ.

Arecanut Price 15 ಜುಲೈ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

Leave a Comment