ಹೊಸನಗರ ; ಇಲ್ಲಿನ ಭೂ ಅಭಿವೃದ್ಧಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ 4 ವರ್ಷಗಳ ಅವಧಿಗಾಗಿ ಉಪಾಧ್ಯಕ್ಷರಾಗಿ ವಾಲೆಮನೆ ನಾಗೇಶ್ ಅವಿರೋಧವಾಗಿ ಆಯ್ಕೆಯಾದರು.
ಒಂದು ವರ್ಷದ ಹಿಂದೆ ಭೂ ಅಭಿವೃದ್ಧಿ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ನಡೆದಿದ್ದು ಅದರಲ್ಲಿ ಎಂ.ವಿ ಜಯರಾಮ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೋಟೆಶಿರೂರು ಬಿ.ಎನ್ ಗುರುಮೂರ್ತಿ ಆಯ್ಕೆಯಾಗಿದ್ದರು.
ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಗುರುಮೂರ್ತಿಯವರು (ಇಬ್ಬರ ನಡುವೆ ಒಡಂಬಡಿಕೆಯ ಮೇರೆಗೆ) ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮಂಗಳವಾರ ಎಂ.ವಿ ಜಯರಾಮ್ ಅಧ್ಯಕ್ಷತೆಯಲ್ಲಿ ನಿರ್ದೇಶಕರ ಸಭೆಯನ್ನು ಬ್ಯಾಂಕ್ ಆವರಣದಲ್ಲಿ ಏರ್ಪಡಿಸಲಾಗಿದ್ದು ತೆರವಾಗಿದ್ದ ಸ್ಥಾನವನ್ನು ಎಲ್ಲ ನಿರ್ದೇಶಕರ ಬೆಂಬಲದೊಂದಿಗೆ ಹುಂಚ-ಸಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ವಾಲೆಮನೆ ನಾಗೇಶ್ ಮುಂದಿನ 4 ವರ್ಷದ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಎಂ.ವಿ ಜಯರಾಮ್, ನಿರ್ದೇಶಕರಾದ ಬಿ.ಎನ್ ಗುರುಮೂರ್ತಿ, ಬೇಳೂರು ಈಶ್ವರಪ್ಪ, ಮಹೇಂದ್ರ ಪಿ.ಸಿ, ಹೂವಮ್ಮ, ವಿ.ವೈ ಹೇಮಾವತಿ, ನಾಗೇಶ್ ಕೆ.ಟಿ, ಸತೀಶ ಎಂ.ಟಿ, ನರೇಂದ್ರ, ಹೆಚ್.ಆರ್. ದೇವೇಂದ್ರಪ್ಪ, ನಾಗೇಶ ಎಲ್, ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಪಕರಾತ ಕೇಶವ ಹಾಗೂ ಬ್ಯಾಂಕ್‌ನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬ್ಯಾಂಕ್ ಉತ್ತಮ ಗುಣಮಟ್ಟಕ್ಕೆ ತೆಗೆದುಕೊಂಡು ಹೋಗುವ ಭರವಸೆ ; ವಾಲೆಮನೆ ನಾಗೇಶ್
ನಿರ್ದೇಶಕ ಸ್ಥಾನದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವಾಲೆಮನೆ ನಾಗೇಶ್ ಮಾತನಾಡಿ, 2019ರಿಂದ 24ರವರೆಗೆ ರೈತರು ಸಾಲಗಾರರು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಎರಡು ವರ್ಷ ಕೊರಾನಾ ಒಂದು ವರ್ಷ ಬರಗಾಲವಾಗಿರುವುದರಿಂದ ರೈತರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಸಾಕಷ್ಟು ಮಳೆ ಬೆಳೆ ಚೆನ್ನಾಗಿರುವುದರಿಂದ ನಮ್ಮ ಬ್ಯಾಂಕ್‌ನ ಸದಸ್ಯರು ಬ್ಯಾಂಕ್‌ನಿಂದ ಪಡೆದ ಸಾಲ ಮರು ಪಾವತಿ ಮಾಡುತ್ತಿದ್ದು ನಾನು ನಿರ್ದೇಶಕ ಸ್ಥಾನದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಸುಮಾರು 30 ವರ್ಷಗಳ ಈ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಎಂ.ವಿ ಜಯರಾಮ್ ಹಾಗೂ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಇನ್ನೂ ಉತ್ತಮವಾಗಿ ಬ್ಯಾಂಕ್‌ನ ಏಳಿಗೆಗಾಗಿ ಶ್ರಮಿಸುತ್ತೇನೆಂದರು.
ಅಭಿನಂದನೆ :
ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವಾಲೆಮನೆ ಶಿವಕುಮಾರ್‌ರವರನ್ನು ನಮ್ಮ ಬ್ಲಾಕ್ ಕಾಂಗ್ರೆಸ್ ಪಕ್ಷ ಅಭಿನಂದಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್ ಹಾಗೂ ನಗರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ತಿಳಿಸಿದ್ದು, ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ವಾಲೆಮನೆಯವರಿಗೆ ಸನ್ಮಾನಿಸಿ ಇನ್ನೂ ಹೆಚ್ಚಿನ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.