RIPPONPETE ; ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ತಳಲೆ ಸಮೀಪದ ಕಗ್ಗಲಿ ಗ್ರಾಮದ ಅಶೋಕ ಎನ್.ಎಂಬುವರ ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ 24 ಗ್ರಾಂ ಚಿನ್ನಾಭರರಣ, 15 ಸಾವಿರ ನಗದು, 85 ಗ್ರಾಂ ಬೆಳ್ಳಿಯನ್ನು ಹಾಡಹಗಲೇ ಕಳವು ಮಾಡಿಕೊಂಡು ಪರಾರಿಯಾದಯಾಗಿರುವ ಘಟನೆ ನಡೆದಿದೆ.
ಗದ್ದೆ ಕೆಲಸಕ್ಕಾಗಿ ತೆರಳಿದ ಆಶೋಕನ ಪತ್ನಿ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದು ನೋಡಿದಾಗ ಬಾಗಿಲ ಬೀಗ ಒಡೆದಿರುವುದು ಕಂಡು ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಇದೇ ರೀತಿಯಲ್ಲಿ ಅದೇ ದಿನವೇ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಂಗಳವಾಡಿ ಗ್ರಾಮದ ಶ್ರೀನಾಥ್ ಎಂಬುವರ ಮನೆ ಬೀಗ ಮುರಿದು ಹಗಲು ವೇಳೆ ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಎರಡು ಕಡೆಯಲ್ಲಿ ಈ ರೀತಿ ಬೀಗ ಮುರಿದು ಸರಣಿ ಕಳ್ಳತನವಾಗಿರುವುದು ಇಲ್ಲಿನ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ.