HSRP :ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ ಅನುಷ್ಠಾನದ ಗಡುವನ್ನು ಸಾರಿಗೆ ಸಚಿವಾಲಯ ವಿಸ್ತರಿಸಿದೆ. ಎಚ್‌ಎಸ್‌ಆರ್‌ಪಿ ಲೈಸೆನ್ಸ್ ಪ್ಲೇಟ್‌ಗಳ ಅಳವಡಿಕೆಯ ಗಡುವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲಾಗಿದೆ.ಹೀಗಾಗಿ ರಾಜ್ಯ ಸರ್ಕಾರ ವಾಹನ ಸವಾರರಿಗೆ (ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅವಧಿ) ಸಂತಸದ ಸುದ್ದಿ ತಂದಿದೆ.
ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ವಿತರಿಸಲು ಡಿಒಟಿ ಹಲವು ಬಾರಿ ಗಡುವನ್ನು ವಿಸ್ತರಿಸಿದೆ, ಆದರೆ ರಾಜ್ಯದ ವಾಹನ ಚಾಲಕರು ಸಹ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ಪಡೆಯಲು ಆಸಕ್ತಿ ತೋರಿಸಿಲ್ಲ. ರಾಜ್ಯದಲ್ಲಿ ಎರಡು ಕೋಟಿ ವಾಹನಗಳು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕಿದೆ. ಪ್ರಸ್ತುತ ಕರ್ನಾಟಕದಲ್ಲಿ 45 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ.ಚಾಲಕರಿಗೆ ಹೆಚ್ಚಿನ ಸಮಯ–ಹೀಗಾಗಿ ಕಾರುಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಸುವ ಗಡುವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಿಸಿ ಚಾಲಕರಿಗೆ ಕಾಲಾವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
HSRP ಪ್ಲೇಟ್ ಎಂದರೇನು?

ಈ ಎಚ್‌ಎಸ್‌ಆರ್‌ಪಿ ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ಹೊಸ ಕಾರುಗಳಿಗೆ ಈ ರೀತಿಯ ಸಂಖ್ಯೆಗಳು ಈಗ ಕಡ್ಡಾಯವಾಗಿದೆ. ಈ ಪುಟಗಳಲ್ಲಿ ಸಂಖ್ಯೆಗಳನ್ನು ಮುದ್ರಿಸಲಾಗುತ್ತದೆ.2018 ರ ಮೊದಲು ವಾಹನದ ನೋಂದಣಿ ಸಂಖ್ಯೆಯನ್ನು ಬದಲಾಯಿಸಲು ವಿಫಲವಾದರೆ ಕನಿಷ್ಠ 500 ರಿಂದ 1,000 ರೂ.ದಂಡ ಬೀಳಲಿದೆ.
ಒಟ್ಟಿನಲ್ಲಿ ದೇಶದ ಜನರ ಹಿತದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದ್ದು, ಆದಷ್ಟು ಬೇಗ ಜನರಿಗೆ ಈ ಹೊಸ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಸಿಕ್ಕರೆ ಉತ್ತಮ.
Read More
ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು !
ಭದ್ರಾವತಿ ಕಾರ್ಖಾನೆ ಭವಿಷ್ಯದ ಬಗ್ಗೆ ಶೀಘ್ರ ನಿರ್ಧಾರ ; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಹಿರಿಯ ಪತ್ರಕರ್ತ, ಸಹಕಾರಿ ಧುರೀಣ ಎಸ್.ಜಿ.ರಂಗನಾಥ ಇನ್ನಿಲ್ಲ !
MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.