ಭಾರಿ ಮಳೆಗೆ ಕೊಚ್ಚಿ ಹೋದ ಮೋರಿ ದುರಸ್ತಿ

Written by malnadtimes.com

Published on:

HOSANAGARA | ಕಳೆದ ವಾರ ಸುರಿದ ಭಾರಿ ಮಳೆಗೆ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಜಡ್ಡು ಎಸ್ ಸಿ ಕಾಲೋನಿ – ನಾಗರಹಳ್ಳಿ ಸಂಪರ್ಕ ಮೋರಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಈ ಭಾಗದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು.

WhatsApp Group Join Now
Telegram Group Join Now
Instagram Group Join Now

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಈ ಹಿನ್ನಲೆಯಲ್ಲಿ ರಸ್ತೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿದ ಹುಂಚ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ತುರ್ತು ದುರಸ್ತಿಗೆ ಸೂಚಿಸಿದ್ದರು. ಅದರಂತೆ ಮಳೆ ತಗ್ಗಿದ ಹಿನ್ನೆಲೆಯಲ್ಲಿ ತುರ್ತಾಗಿ ಕ್ರಮ ಕೈಗೊಂಡು ಮೋರಿ ದುರಸ್ತಿ ಕಾರ್ಯ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಮಂಗಲ, ಹುಂಚ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಮನೆ ಕುಸಿತ, ಸಂಪರ್ಕ ಕಡಿತ ಸೇರಿದಂತೆ ಮಳೆಹಾನಿ ಸಮಸ್ಯೆಗಳಿದ್ದಲ್ಲಿ ಕೂಡಲೇ ಗ್ರಾಮಾಡಳಿತದ ಗಮನಕ್ಕೆ ತಂದಲ್ಲಿ ತ್ವರಿತವಾಗಿ ಸ್ಪಂದಿಸುತ್ತೇವೆ. ಮೋರಿ ಕುಸಿತದಿಂದ ಮಠದಜಡ್ಡು – ನಾಗರಹಳ್ಳಿ ಸಂಪರ್ಕ ಕಡಿತಗೊಂಡಿತ್ತು. ತುರ್ತು ದುರಸ್ತಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಇಒ ನರೇಂದ್ರ ಕುಮಾರ್, ಗ್ರಾಪಂ ಪಿಡಿಓ ರಮೇಶ್ ಇನ್ನಿತರರಿದ್ದರು.

ಆನೆ ದಾಳಿ, ಮೃತ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

Leave a Comment