ಹೊಸನಗರ ; ತಾಲ್ಲೂಕಿನ ಹುಂಚ ಹೋಬಳಿ ತೊಗರೆ ಗ್ರಾಮದ ಸರ್ವೆ ನಂಬರ್ 96ರಲ್ಲಿ ಮರಗಳನ್ನು ಅಕ್ರಮವಾಗಿ ಕಡತಲೆಗಳಾಗುತ್ತಿದ್ದರೂ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಸುಮಾರು ಐದಾರೂ ದಿನಗಳ ಹಿಂದೆ ಅಕ್ರಮವಾಗಿ ಮರಗಳ ಕಡತಲೆಯಾಗುತ್ತಿದೆ. ಬೆಲೆ ಬಾಳುವ ಮರಗಳ ಮಾರಣಹೋಮ ನಡೆಯುತ್ತದೆ ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂಬ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಲಕ್ಷಾಂತರ ರೂ. ಬೆಲೆ ಬಾಳುವ ಮರಗಳಾದ ದೇವದಾರಿ, ಭೋಗಿ ಮರಗಳ ಮಾರಣಹೋಮವಾಗಿದ್ದು ಗ್ರಾಮಸ್ಥರು ಹೇಳುವಂತೆ ಸುಮಾರು 60 ಅಡಿ ನಾಟಾ ಕಳ್ಳ ಸಾಗಾಣಿಕೆಯಾಗಿದ್ದು ಅಂದಾಜು ಸರ್ಕಾರದ ಬೆಲೆ 2 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಬೆಲೆಯ ನಾಟಾವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದ್ದು ಮರಗಳು ಕಡಿದ ಕೆಲವು ತುಂಡುಗಳು ಹಾಗೂ ಸಣ್ಣಪುಟ್ಟ ಮರದ ತುಂಡುಗಳು ಅಲ್ಲೆ ಬಿಟ್ಟಿದ್ದಾರೆ.
ರಾಜಕೀಯ ಪ್ರವೇಶ ?
ಅಲ್ಲಿನ ಗ್ರಾಮಸ್ಥರು ಆರೋಪಿಸುವಂತೆ ನಾವು ಅರಣ್ಯ ಇಲಾಖೆಯವರ ಗಮನಕ್ಕೆ ಈಗಾಗಲೇ ತಂದಿದ್ದು ಅರಣ್ಯ ಸಿಬ್ಬಂದಿಗಳು ರಾಜಕೀಯ ನಾಯಕರ ಬೆಂಬಲದೊಂದಿಗೆ ಅಕ್ರಮ ಕಡತಲೆ ಮಾಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮೌಖಿಕವಾಗಿ ಮರಗಳ ಕಡತಲೆಯಾಗುತ್ತಿದೆ ಎಂದು ತಿಳಿಸಿದರೂ ರಾಜಕೀಯ ನಾಯಕರ ಒತ್ತಡಕ್ಕೆ ಘಟನಾ ಸ್ಥಳಕ್ಕೆ ಬಂದಿಲ್ಲ ಮತ್ತು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ರಾಜಕೀಯ ಒತ್ತಡಕ್ಕೆ ಅಮಾಯಕರನ್ನು ಬಲಿ ಕೊಡಬೇಡಿ ;
ಹುಂಚ ಹೋಬಳಿ ತೊಗರೆ ಗ್ರಾಮದಲ್ಲಿ ಅಕ್ರಮ ಮರಗಳ ಮಾರಣಹೋಮವಾಗಿದೆ ಎಂದು ತಿಳಿದು ಪ್ರಕರಣ ಮುಚ್ಚಿ ಹಾಕುವುದಕ್ಕೆ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಅಕ್ರಮವಾಗಿ ಮರಗಳ ಕಡತಲೆ ಮಾಡಿದವರನ್ನು ಬಿಟ್ಟು ಅಮಾಯಕರ ಮೇಲೆ ಕೇಸ್ ಹಾಕಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
ಅರಣ್ಯ ಪಡೆ ಭೇಟಿ, ಪರಿಶೀಲನೆ ;
ಗ್ರಾಮಸ್ಥರ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲಾ ಅರಣ್ಯ ಪಡೆಯ ತಂಡ ಮರ ಕಡಿತಲೆಯಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.