ಹೊಸನಗರ ; ಮಲೆನಾಡಿನ ಹೆಬ್ಬಾಗಿಲು ಎನಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಳೇಬಾಣಿಗಾ, ಹರಿದ್ರಾವತಿ, ಮೂಡುಬಾ, ಈಚಲಕೊಪ್ಪ, ಹಲುಸಾಲೆ ಮಳವಳ್ಳಿ, ಗಂಗನಕೊಪ್ಪ, ತೋಟದಕೊಪ್ಪ ಗ್ರಾಮಗಳಲ್ಲಿನ ಶರಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ವ್ಯಾಪಕವಾಗಿ ಅಕ್ರಮ ಮರಳು ಶೇಖರಣೆ ಹಾಗೂ ಸಾಗಾಟ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಾಗಿದ್ದಾರೆ.

ಹೌದು, ಉತ್ತರ ಪ್ರದೇಶದ ಕೂಲಿ ಕಾರ್ಮಿಕರ ಮೂಲಕ ತೆಪ್ಪ ಬಳಸಿ ಮರಳು ಶೇಖರಿಸಿ ರಸ್ತೆಯ ಮೂಲಕ ಮರಳು ರಾಜಾರೋಷವಾಗಿ ಸಾಗಾಟ ಮಾಡಲು 5 ಸಾವಿರ ರೂ. ಪ್ರತಿ ಲೋಡ್ ಗೆ ಮಾಮೂಲಿ ನಿಗದಿಪಡಿಸಿ ಮರಳು ಸಾಗಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಾಗಲಿ, ಸ್ಥಳೀಯ ಅಧಿಕಾರಿಗಳಾಗಲಿ ಆ ಪ್ರದೇಶಕ್ಕೆ ಭೇಟಿ ನೀಡದೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1BTTSoqPzj/
ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮರಳು ಸಾಗಾಟ ತಡೆಯಲು ಮುಂದಾಗುವರ ಕಾದುನೋಡಬೇಕಿದೆ.