RIPPONPETE ; ಕೋಣಂದೂರು ಶ್ರೀಮದ್ ಗಿರಿರಾಜ ಶ್ರೀಶೈಲ ಸೂರ್ಯ ಸಿಂಹಾಸನಾ ಶಾಖಾ ಶ್ರೀ ಶಿವಲಿಂಗೇಶ್ವರ ಬೃಹನ್ಮಠದಲ್ಲಿ ನವೆಂಬರ್ 7 ಮತ್ತು 8 ರಂದು ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಪೂಜೆ ಶಿಲಾಮಂಟಪ ಕರ್ತೃಗದ್ದುಗೆ ಲಿಂಗ ಪ್ರತಿಷ್ಠಾಪನೆ ಗುರುನಿವಾಸ ಲೋಕಾರ್ಪಣೆ ಚಂದ್ರಶಾಲೆ ಉದ್ಘಾಟನೆ ಮತ್ತು ಶ್ರೀಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಗುರುವಿರಕ್ತ ಸಮಾಗಮ 1008 ಮುತ್ತೈದೆಯರಿಗೆ ಉಡಿತುಂಬವ ಕಾರ್ಯಕ್ರಮ ಮತ್ತು ಧರ್ಮ ಜಾಗೃತಿ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಕೋಣಂದೂರು ಬೃಹನ್ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನ. 6 ರಂದು ಸಂಜೆ ನೂತನ ದೇವಾಲಯ ಪ್ರವೇಶೋತ್ಸವ ಕರ್ತೃ ಗದ್ದುಗೆಯಲ್ಲಿ ಶಿವಲಿಂಗ ಪ್ರತಿಷ್ಟಾಪನೆ ಪೂಜಾ ವಿಧಿ ವಿಧಾನಗಳು ಜರುಗುವುದು.
ನ. 7 ರಂದು ನಂದಿಪುರ, ಬೀರೂರು ಕ್ಯಾಸನೂರು ತೊಗರ್ಸಿ, ಕೂಡಲ ಅಕ್ಕಿ ಆಲೂರು ವಿರಕ್ತಮಠ, ಅಂಕುಶದೊಡ್ಡಿ, ಹೇರೂರು ಮಠಗಳ ಶಿವಾಚಾರ್ಯರುಗಳ ನೇತೃತ್ವದಲ್ಲಿ ಶಿಲಾಮಂಟಪ ಶ್ರೀಶಿವಲಿಂಗೇಶ್ವರ ಕರ್ತೃಗದ್ದುಗೆ ಪುನರ್ ಪ್ರಾಣ ಪ್ರತಿಷ್ಠಾಪನೆ ಸಂಸ್ಕಾರ ವಿಧಿವಿಧಾನಗಳ ಪೂಜಾ ಕೈಂಕರ್ಯಗಳು ಜರುಗಲಿದೆ.
ನಂತರ ಬೆಳಗ್ಗೆ 8.30 ಕ್ಕೆ ಶ್ರೀಶೈಲ ಜಗದ್ಗುರು ಮಹಾಸನ್ನಿಧಿಯವರ “ಇಷ್ಟಲಿಂಗ ಮಹಾಪೂಜೆ‘’ ಮಧ್ಯಾಹ್ನ 2.30 ಕ್ಕೆ ಶ್ರೀಶೈಲ ಪೀಠದ 1008 ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರುಗಳು ದಿವ್ಯಸಾನಿಧ್ಯದಲ್ಲಿ ಮಹಿಳಾ ಧಾರ್ಮಿಕ ಕಾರ್ಯಕ್ರಮ ಮತ್ತು 1008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ.
ಮಹಿಳಾ ಧಾರ್ಮಿಕ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸುವರು. ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ, ಅಖಿಲ ಭಾರತ ವೀರಶೈವ ಲಿಂಗಾಯಿತ ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷೆ ವಿನುತಾ ರವಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ‍್ಯಾನಾಯ್ಕ್, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಸನಾತನ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ವಿಷಯದ ಕುರಿತು ನಿವೃತ್ತ ಪ್ರಾಚಾರ್ಯ ಕಿರಣದೇಸಾಯಿ ಭದ್ರಾವತಿಯ ನ್ಯಾಯಾವಾದಿ ಶೋಭಾ ಉಪನ್ಯಾಸ ನೀಡುವರು.
ನ. 7 ರಂದು ಸಂಜೆ 6.30 ಕ್ಕೆ ಪಂಚಾಚಾರ್ಯ ಸಾಂಸ್ಕೃತಿಕ ವೈಭವ ಧರ್ಮ ಸಮಾರಂಭ :
ಶ್ರೀಶೈಲ ಪೀಠದ 1008 ಜಗದ್ಗುರು ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರುಗಳ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.
ಹಾವೇರಿ ಕ್ಷೇತ್ರದ ಶಾಸಕ ಹಾಗೂ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ ಪಂಚಾಚಾರ್ಯ ಸಾಂಸ್ಕೃತಿಕ ವೈಭವ ಧರ್ಮಸಮಾರಂಭವನ್ನು ಉದ್ಘಾಟಿಸುವರು.
ತೊಗರ್ಸಿ ಮಳೆಹಿರೇಮಠದ ಮಹಾಂತದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರುಗಳಾದ ಡಿ.ಜಿ.ಶಾಂತನಗೌಡ, ಯು.ಬಿ.ಬಣಕಾರ್, ಗೋಪಾಲಕೃಷ್ಣ ಬೇಳೂರು, ಆರ್.ಎಂ.ಮಂಜುನಾಥಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಈರೇಶ್, ಮುರುಗೇಶ್, ದಿನೇಶ ಬರದವಳ್ಳಿ ಇನ್ನಿತರರು ಭಾಗವಹಿಸುವರು.
ಗ್ರಂಥ ಬಿಡುಗಡೆಯನ್ನು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ್ ಬಿಡುಗಡೆ ಮಾಡುವರು.
ನ. 8 ರಂದು ಬೆಳಗ್ಗೆ 9.30 ಕ್ಕೆ ಕಾಶಿ, ಶ್ರೀಶೈಲ, ಉಜ್ಜಯನಿ, ಆನಂದಪುರ ಗುರುವಿರಕ್ತ ಜಗದ್ಗುರುಗಳಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಉತ್ಸವ ಜರುಗಲಿದೆ. ನಂತರ 11 ಗಂಟೆಗೆ ಶ್ರೀಮದ್ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲಪೀಠದ ಜಗದ್ಗುರು ಡಾ.ಚನ್ನಸಿದ್ದಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಆನಂದಪುರ ಮುರುಘಾರಾಜೇಂದ್ರಮಠದ ಜಗದ್ಗುರು ಡಾ.ಮಲ್ಲಿಕಾರ್ಜುನಮುರುಘಾರಾಜೇಂದ್ರ ಮಹಾಸ್ವಾಮಿಜಿ,ಉಜ್ಜಯನಿ ಪೀಠದ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭವವತ್ಪಾದರು ದಿವ್ಯ ಸಾನಿಧ್ಯದಲ್ಲಿ ಧರ್ಮಜಾಗೃತಿ ಸಮಾರಂಭ ಏರ್ಪಡಿಸಲಾಗಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸುವರು. ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸುವರು.
ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ದಾನಿಗಳ ನಾಮಫಲಕ ಉದ್ಘಾಟಿಸುವರು. ಅರಣ್ಯ ಸಚಿವ ಈಶ್ವರಖಂಡ್ರೆ ಗುರುನಿವಾಸ ಉದ್ಘಾಟಿಸುವರು. ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಚಂದ್ರಶಾಲೆ ಉದ್ಘಾಟಿಸುವರು.
ಮುಖ್ಯತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಕೃಷ್ಣನಾಯ್ಕ್, ಚನ್ನಬಸಪ್ಪ, ಡಿ.ಎಸ್.ಆರುಣ್, ಎಸ್.ರುದ್ರೇಗೌಡ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಉದ್ಯಮಿ ಕೆ.ಆರ್.ಪ್ರಕಾಶ,
ರುದ್ರಮುನಿಸಜ್ಜನ್, ವಿಜಯದೇವ, ಬಸವಾನಿ, ವಿಶ್ವಾನಂದಸ್ವಾಮಿ, ವಾಗೀಶ್ವಯ್ಯ ಮಲೆಬೆನ್ನೂರು, ಚಿದಾನಂದಪ್ಪ, ಮಲ್ಲಿಕಾರ್ಜುನ, ವೀರೇಶ್ ಆಲವಳ್ಳಿ, ಸಂಗನಾಳಮಠ ಹಾಗೂ ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸುವರು.