ಫೆಂಗಲ್ ಚಂಡಮಾರುತ ಹಿನ್ನೆಲೆ, ಭತ್ತದ ಕಟಾವು ಮುಂದೂಡಲು ಸೂಚನೆ

Written by malnadtimes.com

Published on:

THIRTHAHALLI ; ಬಂಗಾಳಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ರಾಜ್ಯದ ಒಳನಾಡು, ಮಲೆನಾಡು ಭಾಗದಲ್ಲಿ ಡಿಸೆಂಬರ್ ಮೊದಲ ವಾರ ಹಿಂಗಾರು ರೀತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈತರು ಭತ್ತದ ಕಟಾವನ್ನು ಒಂದು ವಾರ ಮುಂದೂಡುವಂತೆ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಈಗಾಗಲೇ ಕೊಯ್ಲು ಮಾಡಿದ್ದಲ್ಲಿ ಉತ್ಪನ್ನವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ತೀರ್ಥಹಳ್ಳಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದ ಉತ್ತರ ಭಾರತ ಕಡೆಯಿಂದ ಶುಷ್ಕ ಮತ್ತು ಶೀತ ಗಾಳಿ ಸೆಳೆಯಲ್ಪಡುತ್ತಿದೆ. ನವೆಂಬರ್ 30ರಂದು ಉತ್ತರ ತಮಿಳುನಾಡು ಕರಾವಳಿಯ ಮೂಲಕ ಸೈಕ್ಲೋನ್ ಭೂ ಪ್ರವೇಶಿಸುತ್ತಿದ್ದಂತೆ ರಾಜ್ಯದಲ್ಲಿ ಚಳಿ ವಾತಾವರಣ ಕಡಿಮೆಯಾಗಿ ಮಳೆ ಆರಂಭವಾಗುವ ಮುನ್ಸೂಚನೆ ಇದೆ.

ಡಿಸೆಂಬರ್ 2 ಅಥವಾ 3ರಂದು ಚಂಡಮಾರುತ ಕೇರಳದ ಕಾಸರಗೋಡು ಮತ್ತು ಕಣ್ಣೂರು ಮಧ್ಯೆ ಆರಬ್ಬಿ ಸಮುದ್ರಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಇದು ಒಳನಾಡು ಸೇರಿ ಮಲೆನಾಡು ಭಾಗದಲ್ಲಿ ಮಳೆಗೆ ಕಾರಣವಾಗಲಿದೆ.

ಡಿಸೆಂಬರ್ ಮೊದಲ ವಾರ ಪೂರ್ಣ ಮಳೆ ಸುರಿಯುವ ಸಾಧ್ಯತೆಯಿದ್ದು, ರೈತರು ಭತ್ತದ ಕೊಯ್ಲು ಮುಂದೂಡುವುದು ಸೂಕ್ತವೆಂದು ಕೃಷಿ ಇಲಾಖೆ ತಿಳಿಸಿದೆ.

Leave a Comment