ಹೊಸನಗರ ; ಪಟ್ಟಣದ ಮೆಸ್ಕಾಂ ಕಚೇರಿ ಎದುರಿನ ಒಕ್ಕಲಿಗರ ಸಂಘದ ಕಟ್ಟಡದಲ್ಲಿ ಕಳೆದ ಎಂಟು ವರ್ಷಗಳಿಂದ ನಡೆಸುತ್ತಿದ್ದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಶಾಲಾ ಆಡಳಿತ ಮಂಡಳಿ ಪೋಷಕರು ಗ್ರಾಮಸ್ಥರ ನೆರವಿನಿಂದ ಅದ್ದೂರಿಯಾಗಿ ಹೋಮ-ಹವನಾದಿ ಪೂಜೆಗಳಿಂದ ಸಾಂಕೇತಿಕವಾಗಿ ಪ್ರಾರಂಭಗೊಂಡಿತು.

ಪಟ್ಟಣದಿಂದ 3 ಕಿ.ಮೀ. ದೂರದ ಸಾಗರ ರಸ್ತೆಯ ಗೇರುಪುರ ಬಳಿ ಅಂದಾಜು 20 ಕೋಟಿ ರೂ. ವೆಚ್ಚದ ನೂತನ ಕಟ್ಟಡ ತಲೆಎತ್ತಿ ನಿಂತಿದ್ದು ಶಾಲಾ ಸಂಕಿರಣದಲ್ಲಿ ರಂಗಮಂದಿರ ಹಾಗೂ ಮೇಲ್ಛಾವಣಿ ಕೆಲಸ ಮಾತ್ರ ಬಾಕಿ ಉಳಿದಿದ್ದು ಈ ಕಾರ್ಯದ ನಂತರ ಅಧಿಕೃತವಾಗಿ ಕಟ್ಟಡ ಉದ್ಘಾಟನೆಗೊಳ್ಳಲಿದೆ.

ಇಂದು ವಸತಿ ಶಾಲಾ ಮಕ್ಕಳ ಪೋಷಕರು ತಾವೇ ಖರ್ಚು ವೆಚ್ಚಗಳನ್ನು ಭರಿಸಿ ಅದ್ದೂರಿಯಾಗಿ ಹೋಮ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸ ಅಧ್ಯಯನಕ್ಕೆ ಅನುಕೂಲವಾಗಲು ಹಳೆಯ ಕಟ್ಟಡದ ಕುರ್ಚಿ, ಬೆಂಚು ಹಾಗೂ ಇತರೆ ಶಾಲಾ ಆಡಳಿತ ಮಂಡಳಿಯ ಪರಿಕರಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ನೆರವಾದ ಬಗ್ಗೆ ಪ್ರಾಚಾರ್ಯ ಎಂ.ಕೆ ಚಂದ್ರಶೇಖರ್ ಹಾಗೂ ಶಾಲಾ ಆಡಳಿತ ಮಂಡಳಿಯವರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರಿಗೆ ಗ್ರಾಮಸ್ಥರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





