ಅರಸಾಳಿನಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆ ; ಮತ್ತಿಮನೆ ಸುಬ್ರಹ್ಮಣ್ಯ ಅಭಿನಂದನೆ

Written by Mahesha Hindlemane

Published on:

ಹೊಸನಗರ ; ಸೋಮವಾರದಿಂದ ಪ್ರತಿದಿನ ಬೆಳಿಗ್ಗೆ 6.18ಕ್ಕೆ ಹೊಸನಗರ ತಾಲ್ಲೂಕು ಅರಸಾಳು ರೈಲ್ವೆ ನಿಲ್ದಾಣದಲ್ಲಿ ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು ನಿಲ್ಲುವಂತೆ ಮಾಡಿದ ಸಂಸದ ಬಿ.ವೈ ರಾಘವೇಂದ್ರರಿಗೆ ಹೊಸನಗರದ ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸೋಮವಾರ ಬೆಳಿಗ್ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅರಸಾಳು ಗ್ರಾಮಸ್ಥರು ಇಂಟರ್‌ಸಿಟಿ ರೈಲಿಗೆ ಪೂಜೆ ಸಲ್ಲಿಸಿ ಸಿಹಿಹಂಚಿ ಸಂಭ್ರಮಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ಅರಸಾಳಿನ ನಿಲ್ದಾಣದಲ್ಲಿ ರೈಲು ನಿಲ್ಲುವಂತೆ ಮಾಡಿದ್ದು ಅರಸಾಳು, ಬೆಳ್ಳೂರು, ಕೆಂಚನಾಲ, ರಿಪ್ಪನ್‌ಪೇಟೆ ಹೊಸನಗರ ನಿಟ್ಟೂರು, ಬಾಳೂರು, ಹೆದ್ದಾರಿಪುರ ಗರ್ತಿಕೆರೆ, ಹುಂಚ, ಕೋಡೂರು ಇನ್ನೂ ಹಲವು ಗ್ರಾಮ ಪಂಚಾಯತಿ ಹಾಗೂ ಊರಿನ ಜನರಿಂದ ಬಹುದಿನಗಳ ಬೇಡಿಕೆಯಾಗಿದ್ದು ಇದನ್ನು ಸಂಸದರು ಈಡೇರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್, ನರ‍್ಲೆ ರಮೇಶ್, ಗಣಪತಿ ಬೆಳಗೋಡು, ಉಮೇಶ್ ಕಂಚುಗಾರ್, ಎನ್.ಆರ್ ದೇವಾನಂದ, ಎ.ವಿ. ಮಲ್ಲಿಕಾರ್ಜುನ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment