Kisan Credit Card :ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಬಡ್ಡಿ ರಿಯಾಯಿತಿಯನ್ನು ಮುಂದುವರಿಸಿದ್ದು, ಬೆಂಬಲ ಬೆಲೆ ಹಾಗೂ ಬಡ್ಡಿ ರಹಿತ ಸಾಲದ ನಿರ್ಧಾರದಿಂದ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಇಂಟರೆಸ್ಟ್ ಅನ್ನು ಸಮಯಕ್ಕೆ ಸಾಲ ಪಾವತಿ ಮಾಡುತ್ತಿರುವ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅವರುಗಳಿಗೆ ಕೇಂದ್ರ ಸರ್ಕಾರ ಶೇ 3ರಷ್ಟು ಬಡ್ಡಿ ವಿನಾಯಿತಿಯನ್ನು ನೀಡಲಿದ್ದು, ಇದರಿಂದ ಒಟ್ಟಾರೆ ಬಡ್ಡಿದರ ಕೇವಲ ಶೇ 4 ರಷ್ಟು ಆಗಲಿದೆ.
ರೈತರ ಹೊರೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಜೊತೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆ ಹೊತ್ತಿರುವ ರೈತರಿಗೆ ಮತ್ತೊಂದು ಭದ್ರತೆ ನೀಡುತ್ತಿದೆ ಅಂದರೆ ಖಾರಿಫ್ ಬೆಳೆಗಳಿಗೆ ಬೆಂಬಲೆ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳವಾಗಲಿದೆ. ರಾಗಿಗೆ ರೂ 596ರಷ್ಟು, ತೊಗರಿ ಬೆಳೆಗೆ ರೂ 450,ಉದ್ದಿನ ಬೆಳೆಗೆ ರೂ 400 ಮತ್ತು ಭತ್ತಕ್ಕೆ ರೂ 65ರಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ.
ಈ ಮೂಲಕ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. 7.57 ಕೋಟಿರಷ್ಟು ಜನರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದಿದ್ದು ಬಡ್ಡಿ ರಿಯಾಯಿತಿಯ ಲಾಭವನ್ನು ಕೂಡ ಪಡೆಯಲಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ 2 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದೆ. ರೈತರಿಗೆ ಅಲ್ಪಾವಧಿ ಸಾಲದ ಮೇಲಿನ ಶೇ 7ರಷ್ಟು ಬಡ್ಡಿದರದಿಂದ ರೈತರಿಗೆ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರದ ಈ ನಿಲುವುಗಳಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗಿ ಕೃಷಿ ಆಧಾರಿತ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗಲಿದೆ.
Read More
ರೈತರಿಗೋಸ್ಕರ ಬರೋಬ್ಬರಿ ಶೇ 90ರಷ್ಟು ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ!ಇಂದೇ ಅಪ್ಲೈ ಮಾಡಿ
MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.