HOSANAGARA ; ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕ ವರ್ಗವಿದೆ ಆದರೂ ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಒಲವು ತೋರಿಸದೇ ಖಾಸಗಿ ಶಾಲೆಗಳತ್ತಾ ಮುಖ ಮಾಡುತ್ತಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳು, ಶಿಕ್ಷಕರ ಹಾಗು ಪೋಷಕರ ನಡುವೆ ಸೌಹಾರ್ದ ಸಂಬಂಧವಿದ್ದರೆ ಎಂಥಹ ಸರ್ಕಾರಿ ಶಾಲೆಗಳನ್ನು ಬೆಳೆಸಬಹುದು ಎಂದು ರಾಮಚಂದ್ರಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದರು.
ರಾಮಚಂದ್ರಾಪುರ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ 2024-25ನೇ ಸಾಲಿನ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಎಂದರೆ ಪೋಷಕ ವರ್ಗದವರಲ್ಲಿ ಬೇಸರ ವ್ಯಕ್ತಪಡಿಸುತ್ತಿರುವುದು ಏಕೆ? ಎಂದು ಎಲ್ಲರಲ್ಲಿಯೂ ಕಾಡುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಅಬ್ಬರದ ಪ್ರಚಾರವಿಲ್ಲ ಆದರೆ ಓದಿನ ಗುಣ ಮಟ್ಟ ಖಾಸಗಿ ಶಾಲೆಗಳಿಂತ ಉತ್ತಮವಾಗಿದೆ. ಖಾಸಗಿ ಶಾಲೆಗಳ ಅಬ್ಬರದ ಪ್ರಚಾರದಿಂದ ಪೋಷಕ ವರ್ಗ ಮಾರು ಹೋಗುತ್ತಿದ್ದು ಇದಕ್ಕೆ ಮಕ್ಕಳ ಪೋಷಕರೆ ಕಡಿವಾಣ ಹಾಕಿ ಸರ್ಕಾರಿ ಶಾಲೆಗಳನ್ನು ಬೆಳೆಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪೋಷಕರ ವರ್ಗಕ್ಕೆ ತುಂಬಾ ಗೌರವ ನೀಡುತ್ತಿದ್ದೇವೆ. ಯಾವುದೇ ಕಾರ್ಯಕ್ರಮಗಳಿಗೂ ಅವರಿಗೆ ಆಹ್ವಾನ ನೀಡಿ ಗೌರವಿಸಲಾಗುತ್ತದೆ. ಆದರೂ ಖಾಸಗಿ ಶಾಲೆಯಲ್ಲಿ ಹಣವಿದ್ದ ಪೋಷಕ ವರ್ಗದವರನ್ನು ಅತ್ಯಂತ ಗೌರವಯುತವಾಗಿ ಕಾಣುತ್ತಿದ್ದರೂ ಮಕ್ಕಳ ಪೋಷಕ ವರ್ಗ ಖಾಸಗಿ ಶಾಲೆಗಳತ್ತಾ ಮುಖ ಮಾಡುತ್ತಿರುವುದು ಅರ್ಥವಾಗದ ವಿಷಯವಾಗಿದೆ. ಮುಂದಿನ ದಿನದಲ್ಲಿ ಸರ್ಕಾರಿ ಶಿಕ್ಷಣ ಇಲಾಖೆ ಸರ್ಕಾರಿ ಶಿಕ್ಷಕರಿಗೆ ಶಾಲೆಯ ಶಿಕ್ಷಕರಿಗೆ ಬೇರೆ ಕೆಲಸದ ಹೊರೆ ಹೇರದೇ ಶಿಕ್ಷಣಕ್ಕೂ ಹಾಗೂ ಬೋಧನೆಗೆ ತೋಡಗಿಸಿಕೊಳ್ಳಬೇಕೆಂದು ಈ ಮೂಲಕ ಕರೆ ನೀಡಿದರು.
ಈ ಕಾರ್ಯಕ್ರಮದ ಎಸ್‌ಡಿಎಂಸಿ ಅಧ್ಯಕ್ಷ ರಘುರಾಮ್‌ರವರು ವಹಿಸಿ ಮಾತನಾಡಿ, ರಾಮಚಂದ್ರಾಪುರ ಶಾಲೆ ತಾಲ್ಲೂಕಿನಲ್ಲಿಯೇ ಉತ್ತಮ ಶಾಲೆಯಾಗಿದ್ದು ಮುಖ್ಯಶಿಕ್ಷಕಿ ಕೃಷ್ಣಮ್ಮ, ಸಹಶಿಕ್ಷಕಿ ಸುಜಾತ ಹಾಗೂ ಮಮತಾರವರು ಕಲಿಕೆಯ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣಿಸುತ್ತಿದ್ದಾರೆ. ಈ ಶಾಲೆಯಲ್ಲಿ ಬರೀ ಶಿಕ್ಷಕಿಯರೇ ಇದ್ದರೂ ಯಾವುದೇ ಬೋಧನೆಗೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವುದರ ಜೊತೆಗೆ ಅಷ್ಟೇ ಉತ್ತಮವಾಗಿ ಬೋಧಿಸುತ್ತಿದ್ದಾರೆ. ಇದರ ಜೊತೆಗೆ ಬಿಸಿಯೂಟ ಕಾರ್ಯಕರ್ತೆಯರು ಪ್ರತಿದಿನ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಆಹಾರವನ್ನು ನೀಡುತ್ತಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರಿಗೆ ಹಾಗೂ ಶಿಕ್ಷಕರನ್ನು ಗೌರವ ಪೂರ್ವಕವಾಗಿ ಅಭಿನಂದಿಸಿದರು.
ಅಮೃತ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಸತ್ಯನಾರಾಯಣ ಎನ್.ಎಸ್ ಮಾತನಾಡಿ, ಖಾಸಗಿ ಶಾಲೆಗೂ ಹಾಗೂ ಸರ್ಕಾರಿ ಶಾಲೆಗೂ ಇರುವ ವ್ಯತ್ಯಾಸವನ್ನು ವಿವರಿಸಿದರು.
ಈ ಕಾರ್ಯಕ್ರಮವೂ ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಗೆ ಬಹುಮಾನದ ಕೊಡುಗೆಯನ್ನು ಕಾರಣಗಿರಿ ಜನರಲ್ ಸ್ಟೋರ‍್ಸ್ ಮಾಲೀಕರಾದ ಧನಂಜಯ, ಭೋಜನ ವ್ಯವಸ್ಥೆಯನ್ನು ತಿರುಮಲ ವೈನ್ ಸ್ಟೋರ್ಸ್ ಮಾಲೀಕರು ಹಾಗೂ ಉದ್ಯಮಿ ಚೇತನ್‌ಕುಮಾರ್, ಪ್ರತಿಬಾ ಪುರಸ್ಕಾರವನ್ನು ಎನ್.ಆರ್. ಶಮಂತ್ ಅಡುಗೆ ಸಲಕರಣೆಯನ್ನು ರಾಮಚಂದ್ರಪುರ ಗ್ರಾಮ ಪಮಚಾಯತಿ ಆಡಳಿತ ಮಂಡಳಿಯವರು ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಕೆರೆಹೊಂಡ ವಾಸಿ ಚರಣ್ ಕೆ.ಜಿಯವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹೆಚ್.ಆರ್, ಪಿ.ಎಂ ಪೋಷಣ್ ಸಹಾಯಕ ನಿದೇಶಕ ಶೇಷಚಲನಾಯ್ಕ್, ಶಿಕ್ಷಣ ಸಂಯೋಜಕ ಕರಿಬಸಪ್ಪ, ರುಕ್ಮಿಣಿ ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಪಾರ್ವತಿ, ಗುರುಭಟ್, ಸಿ.ಆರ್.ಪಿ ನಾಗಭೂಷಣ, ಸಿ.ಆರ್.ಪಿ ಸೊನಲೆ ವಿ.ಡಿ ನಾಗರಾಜ್, ಬಿ.ಆರ್.ಪಿ ಮಹೇಶ್, ಶಿಕ್ಷಕರಾದ ಕೃಷ್ಣಮ್ಮ, ಸುಜಾತ ಹಾಗೂ ಮಮತ ಇನ್ನೂ ಮುಂತಾದವರು ಉಪಸ್ಥಿತರಿದ್ದರು.