ಹೊಸನಗರ ; ನಮ್ಮ ಜೇಸಿಐ ಸಂಸ್ಥೆ ಸುಮಾರು 28 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಹೊಸನಗರ ಜನತೆಗೆ ಉತ್ತಮ ಕಾರ್ಯಕ್ರಮವನ್ನು ನೀಡುವುದರ ಜೊತೆಗೆ ಜನಹಿತ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದೆ ಎಂದು ಹೊಸನಗರ ಜೇಸಿಐ ಕೊಡಚಾದ್ರಿಯ ಅಧ್ಯಕ್ಷ ಪ್ರದೀಪ್ ಕೆ ಹೇಳಿದರು.
ಇಲ್ಲಿನ ಜೇಸಿಐ ಹೊಸನಗರ ಕೊಡಚಾದ್ರಿಯ 28ನೇ ಜೇಸಿ ಸಪ್ತಾಹದ ಅಂಗವಾಗಿ ಸೆ. 9 ರಿಂದ 15ರವರೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಮೊದಲ ದಿನದ ಅಂಗವಾಗಿ ಹೊಸನಗರ ಪೊಲೀಸ್ ಠಾಣೆಯ ಮುಂಭಾಗ ಜೇಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಪೂರ್ವ ವಲಯ ಅಧ್ಯಕ್ಷ ಬಿ.ಎಸ್ ಸುರೇಶ್ ಮಾತನಾಡಿ, ದೇವರಲ್ಲಿ ವಿಶ್ವಾಸವು ಮಾನವ ಜೀವನಕ್ಕೆ ಅರ್ಥವನ್ನೂ ಉದ್ದೇಶವನ್ನು ನೀಡುತ್ತದೆ. ಮಾನವ ಸೋದರತೆಯು ರಾಷ್ಟ್ರಗಳ ಸಾರ್ವಭೌಮತ್ವವನ್ನು ಮೀರಿದೆ. ಸ್ವತಂತ್ರ ಉದ್ಯಮದಿಂದ ಆರ್ಥಿಕ ನ್ಯಾಯವನ್ನು ಉತ್ತಮವಾಗಿ ಸಾಧಿಸಬಲ್ಲರು. ಸರ್ಕಾರವೂ ಕಾನೂನು ಆಧಾರಿತವಾಗಿರಬೇಕೆ ಹೊರತು ವ್ಯಕ್ತಗಳಾದಾರಿತವಾಗಿರಬಾರದು. ಜಗತ್ತಿನ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಮತ್ತು ಮಾನವ ಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯವಾಗಿದೆ ಎಂದು ನಮ್ಮ ಸಂಸ್ಥೆ ಪ್ರತಿಯೊಬ್ಬರಿಗೂ ಕಲಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಮೊದಲ ದಿನದ ಸಪ್ತಾಹದಲ್ಲಿ ಮಾಜಿ ಅಧ್ಯಕ್ಷ ಮೋಹನ್ ಜಿ ಶೆಟ್ಟಿ, ಜೆಸಿ ಕಾರ್ತಿಕ್, ಕಾರ್ಯದರ್ಶಿ ಮಹೇಶ್, ನಿರ್ದೇಶಕರಾದ ಜೆಸಿ ಶೈಲ ಕೇಶವ್, ಜೆಸಿ ಜ್ಯೋತಿ, ರೇಷ್ಮಾ, ಸುಶೀಲ, ಹರೀಶ್, ಸಂತೋಷ, ಮೂಳೆ ಡಾಕ್ಟರ್ ವಿನಯ್‌ಕುಮಾರ್, ರಾಧಾಕೃಷ್ಣ ಪೂಜಾರಿ, ವಿನಯ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.