HOSANAGARA ; ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Written by malnadtimes.com

Published on:

HOSANAGARA ; ಅತಿ ಶೀಘ್ರದಲ್ಲೇ ಪಂಚಾಯತಿ ಚುನಾವಣೆಗಳು ಘೋಷಣೆಯಾಗುವ ಕಾಲ ಸನ್ನಿಹಿತವಾದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲು ಕರೆ ನೀಡಿದ್ದು ಆ ಮೂಲಕ ರಾಜ್ಯಾದ್ಯಂತ ಸಂಘಟನೆಗೆ ಪಕ್ಷ ಮುಂದಾಗಿದ್ದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ರಾಮಕೃಷ್ಣ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಬುಧವಾರ ಪಟ್ಟಣದ ಶೀತಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪಕ್ಷದ ನೂತನ ಕಾರ್ಯಕರ್ತರ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದಲೇ ಪಂಚಾಯತಿ ಚುನಾವಣೆ ಎದುರಿಸಲು ಕಾರ್ಯಕರ್ತರು ತಯಾರಿ ನಡೆಸಲಿ ಎಂದರು.

ರಾಜಕಾರಣದಲ್ಲಿ ಏರಿಳಿತಗಳು ಸಾಮಾನ್ಯ. ಇದರಿಂದ ಪಕ್ಷದ ಕಾರ್ಯಕರ್ತರು ಎಂದೂ ವಿಚಲಿತರಾಗಬಾರದು. ಈ ಬಾರಿ ಹೆಚ್.ಡಿ.ಕೆ.ಗೆ ಕೇಂದ್ರದಲ್ಲಿ ಪ್ರಮುಖ ಸಚಿವ ಸ್ಥಾನ ದೊರೆತಿದೆ. ಇದರಿಂದ ಜೆಡಿಎಸ್ ಪಕ್ಷ ಸಂಘಟನೆಗೆ ಸಹಕಾರಿ ಆಗಲಿದ್ದು, ಕಾರ್ಯಕರ್ತರು, ಮುಖಂಡರು ಅವರ ಬೆಂಬಲಕ್ಕೆ ಸದಾ ನಿಲುವಂತೆ ಅವರು ಕರೆ ನೀಡಿದರು.

ಪಕ್ಷದ ತಾಲೂಕು ಮಾಜಿ ಅಧ್ಯಕ್ಷ ಎಂ.ವಿ.ಜಯರಾಂ ಮಾತನಾಡಿ, ಕೋಮುವಾದಿಗಳನ್ನು ಸದಸ್ಯತ್ವದಿಂದ ದೂರವೇ ಇಡಬೇಕು. ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವಂತ ಹಾಗು ಸಮಾಜವಾದಿ ತಳಹದಿ ಅರಿತುಕೊಂಡ ಯುವಕರಿಗೆ ಸದಸ್ಯತ್ವದಲ್ಲಿ ಹೆಚ್ಚು ಮಾನ್ಯತೆ ನೀಡಬೇಕು. ಅವಕಾಶವಾದಿಗಳಿಗೆ ಪಕ್ಷದಲ್ಲಿ ಎಂದೂ ಮಣೆ ಹಾಕಬಾರದಾಗಿ ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮಾತನಾಡಿ, ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಪಕ್ಷದ ಹಿರಿಯ ಸದಸ್ಯರಿಗೆ ಗೌರವ ಕೊಡುವ ಸಂಪ್ರದಾಯವನ್ನು ನೂತನ ಕಾರ್ಯಕರ್ತರು ಬೆಳಸಿಕೊಂಡಾಗ ಮಾತ್ರವೇ ಸಂಘಟನೆ ಸದೃಡತೆ ಕಾಣಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರದ ಚುಕ್ಕಾಣಿ ಹಿಡಿಯಲು ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗಳ ಫಲಿತಾಂಶ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಹಿರಿಯ ಮುಖಂಡರ ಸಲಹೆ, ಮಾರ್ಗದರ್ಶನದಲ್ಲಿ ಹೋಬಳಿ ಮಟ್ಟದಲ್ಲಿ ಪಕ್ಷದ ನೂತನ ಸಮಿತಿ ರಚನೆಗೆ ಮುಂದಾಗಿ ಎಂಬ ಸಲಹೆ ನೀಡಿದರು.

ಈ ವೇಳೆ ಪಕ್ಷದ ಅಲ್ಪಸಂಖ್ಯಾತ ಘಟಕದ ತಾಲೂಕು ನೂತನ ಅಧ್ಯಕ್ಷರಾಗಿ ಫಾರೂಕ್ ಹಾಗು ಯುವ ಘಟಕದ ತಾಲೂಕು ಅಧ್ಯಕ್ಷ ರಾಗಿ ಸಂದೀಪ್ ನೇಮಕಗೊಂಡರು.

ಇದಕ್ಕೂ ಮೊದಲು ಇತ್ತೀಚಿಗೆ ನಿಧನರಾದ ಪಕ್ಷದ ಹಿರಿಯ ಕಾರ್ಯಕರ್ತ ಹೆಚ್.ಆರ್. ಪ್ರಕಾಶ್ ಹಾಗು ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ, ತಳಲೆ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಮಳವಳ್ಳಿ ಗೋಪಾಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭೆಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ವರದರಾಜ್, ಕಾರ್ಯದರ್ಶಿ ನಾಗೇಶ್, ತಾಲೂಕು ಅಧ್ಯಕ್ಷ ವರ್ತೇಶ್, ಪ್ರಮುಖರಾದ ರಮಾನಂದ ಮುಡಬಾಗಿಲು,ಜಯನಗರ ಷಣ್ಮುಖ, ವಾಸಪ್ಪಗೌಡ, ಕಲ್ಲೂರು ಈರಣ್ಣ,ಪ.ಪಂ.ಮಾಜಿ ಅಧ್ಯಕ್ಷ ಚಂದ್ರಣ್ಣ, ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷೆ ಸುಮತಿ ಪೂಜಾರ್, ಅರಳಿಕೊಪ್ಪ ಗಣಪತಿ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment