ಜೋಗದ ನಿಷೇಧಿತ ಪ್ರದೇಶಕ್ಕೆ ತೆರಳಿ ಹುಚ್ಚಾಟ ನಡೆಸಿದ ಇಬ್ಬರು !

Written by Koushik G K

Published on:

ಸಾಗರ :ಈ ವರ್ಷದ ಉತ್ತಮ ಮಳೆಯಿಂದಾಗಿ ತುಂಬಿರುವ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗಿ ಜೋಗ ಜಲಪಾತದ ವೈಭವ ಮತ್ತೆ ಮರುಕಳಿಸಿದೆ ,ಈ ಸಮಯದಲ್ಲಿ ಲಿಂಗನಮಕ್ಕಿಯಿಂದ ಸುಮಾರು 15 ಸಾವಿರ ಕ್ಯೂಸೆಕ್ ನಿರನ್ನು ಹೊರಬಿಡಲಾಗಿತ್ತು .

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜೋಗ್ ಫಾಲ್ಸ್‌ನಲ್ಲಿ ಬಹು ಅಪಾಯದ ಸ್ಥಳವೆಂದೇ ಪರಿಗಣಿಸಲಾಗುವ ರಾಜಾ ಫಾಲ್ಸ್ ಪ್ರದೇಶಕ್ಕೆ ಭೇಟಿ ನೀಡಿ Arungowda wanderlust and Juvee official ಎಂಬುವವರು ಈ ಜಾಗದಲ್ಲಿ ಹುಚ್ಚಾಟ ನಡೆಸಿದ್ದಾರೆ ಅದಲ್ಲದೆ ಆ ಜಾಗದಲ್ಲಿ ಮಲಗಿ ವಿಡಿಯೋವನ್ನ ತಮ್ಮ instagarm ಸ್ಟೋರಿ ಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.ವೀಕ್ಷಣೆಗಾಗಿ ಈ ಅಪಾಯಕಾರಿ ಪ್ರದೇಶದಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವುದು ಬೆಳಕಿಗೆ ಬಂದಿದೆ.ಅಪಾಯಕಾರಿಯಾಗಿರುವ ಈ ಭಾಗವು ಪ್ರವಾಸಿಗರಿಗೆ ನಿಷೇಧಿಸಲಾಗಿದೆ.

ಈ ಹಿಂದೆ ಇದೆ ಜಾಗದಲ್ಲಿ ಹಲವಾರು ಪ್ರಾಣವನ್ನ ಕಳೆದುಕೊಂಡಿದ್ದಾರೆ ,ಹಾಗು ಇನ್ಸ್ಟಾಗ್ರಾಮ್ ಮೂಲಕ ಆ ಜಾಗಕ್ಕೆ ಇನ್ನಷ್ಟು ಜನರು ಹೋಗುವ ಹಾಗೆ ಪ್ರಚೋದನೆ ನೀಡುತ್ತಿರುವ ಇವರ ಮೇಲೆ ಯಾವ ಕ್ರಮ ಜರುಗಲಿದೆ ಎಂಬುದನ್ನ ಕಾದು ನೋಡಬೇಕಾಗಿದೆ .

ಈ ಹಿಂದೆ ಬೆಂಗಳೂರಿನ ಜಾಲಹಳ್ಳಿ ಮೂಲದ ಯೂಟ್ಯೂಬರ್ ಗೌತಮ್ ಅರಸು (32) ಅವರ ಮೇಲೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಲಾಯಿತು. ಭಾರತೀಯ ದಂಡ ಸಂಹಿತೆಯ ವಿಧಿ 188 (ಸಾರ್ವಜನಿಕ ಸೇವಕರ ಆದೇಶ ಉಲ್ಲಂಘನೆ), ವಿಧಿ 336 (ಅಪಾಯಕಾರಿಯಾಗಿ ಜೀವಕ್ಕೆ ಅಥವಾ ಇತರರಿಗೆ ಹಾನಿಯುಂಟುಮಾಡುವ ಕ್ರಿಯೆ), ಮತ್ತು ಪ್ರವಾಸಿ ಸ್ಥಳಗಳ ಸಂರಕ್ಷಣೆಗೆ ಸಂಬಂಧಿಸಿದ ವಿಶೇಷ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು .

Leave a Comment