ರಿಪ್ಪನ್‌ಪೇಟೆ: ಈ ಬಾರಿಯ ಮಳೆಗಾಲದ ಕೆಂಚನಾಲ ಮಾರಿಕಾಂಬ ಜಾತ್ರೆ ಭಕ್ತಸಾಗರದೊಂದಿಗೆ ಅತ್ಯಂತ ಭಕ್ತಿ ಭಾವಪೂರ್ಣವಾಗಿ ಮಂಗಳವಾರ ನಡೆಯಿತು.
ಈ ಜಾತ್ರೆಗೆ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಹ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ವರ್ಷಕ್ಕೆ ಎರಡು ಬಾರಿ ನಡೆಯುವ ಈ ಜಾತ್ರೆ ಮಳೆಗಾಲದಲ್ಲಿ ಮಂಗಳವಾರ ಮತ್ತು ಬೇಸಿಗೆಯಲ್ಲಿ ಬುಧವಾರ ಕೆಂಚನಾಲ ಗ್ರಾಮದಲ್ಲಿ ಜಾತ್ರೆ ನಡೆಯುತ್ತದೆ. ಜನಜೀವನದ ಒಂದು ಮೂಲಭೂತ ಭಾಗವಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಮಾರಿಕಾಂಬ ದೇವಾಲಯವು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಭಕ್ತಿ-ಶ್ರದ್ಧೆಗಳ ಪ್ರಮುಖ ಕೇಂದ್ರವಾಗಿದೆ.

ಭಕ್ತರ ನಡುವೆ ದೇವಿಯ ಬಗ್ಗೆ ಅಚಲವಾದ ನಂಬಿಕೆ ಇದೆ. ಅವರು ಮಾಡಿದ ಹರಕೆಗಳು ದೇವಿಯ ಕೃಪೆಯಿಂದ ಈಡೇರುತ್ತವೆ ಎಂಬ ನಂಬಿಕೆಯಿಂದ ಕೃಷಿಯ ರಕ್ಷಣೆ, ಆರೋಗ್ಯ ಸಮಸ್ಯೆಗಳಿಂದ ಮುಕ್ತಿ, ಕುಟುಂಬದ ನೆಮ್ಮದಿ ಹಾಗೂ ಸಮಾಜದಲ್ಲಿ ಶಾಂತಿಗಾಗಿ ದೇವಿಗೆ ಹರಕೆ ಮಾಡುತ್ತಾರೆ. ಈ ಹರಕೆ ಈಡೇರುವ ಹಿನ್ನೆಲೆಯಲ್ಲಿ ಭಕ್ತರು ದೇವಾಲಯಕ್ಕೆ ಹಣ್ಣು-ಹಂಪಲುಗಳು ಹಾಗೂ ಕೋಳಿ, ಕುರಿಗಳನ್ನು ನೀಡುವ ಸಂಪ್ರದಾಯವಿದೆ.
ಮುಜರಾಯಿ ಇಲಾಖೆಯ ಮೇಲುಸ್ತುವಾರಿಯಲ್ಲಿ ದೇವಸ್ಥಾನ ಸಮಿತಿ ಹಾಗೂ ಗ್ರಾಮ ಪಂಚಾಯತಿಯ ಸಹಕಾರದಿಂದ ಜಾತ್ರೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಇಂದು ಮುಂಜಾನೆಯಿಂದಲೇ ಸುರಿಯುತ್ತಿದ್ದ ಜಿಟಿಜಿಟಿ ಮಳೆಯ ನಡುವೆಯೂ ವಯೋವೃದ್ಧರು, ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ದರ್ಶನ ಪಡೆದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.