ರಿಪ್ಪನ್‌ಪೇಟೆ ; ಸಾಲ ಬಾಧೆ ತಾಳಲಾರದೆ ವಿಷ ಸೇವಿಸಿ ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ನಡೆದಿದೆ.
ಕೆಂಚನಾಲ ಗ್ರಾಮದ ಅಶೋಕ್ ಕೆ.ಎಸ್ (24) ಮೃತ ರೈತ. ಕೆಂಚನಾಲ ಗ್ರಾಮದ ಸರ್ವೆ ನಂ 09 ರ ಜಮೀನಿನಲ್ಲಿ ಶುಂಠಿ, ಜೋಳ ಹಾಗೂ ಭತ್ತದ ಬೆಳೆಯನ್ನು ಬೆಳೆಯುವ ಸಲುವಾಗಿ ಧರ್ಮಸ್ಥಳ ಸಂಘದಿಂದ 2 ಲಕ್ಷ ರೂ., ಗ್ರಾಮೀಣಾಭಿವೃದ್ಧಿ ಕೂಟ ಸಾಗರ ಸಂಸ್ಥೆಯಿಂದ 1 ಲಕ್ಷ ರೂ. ಸಾಲವನ್ನು ಮಾಡಿದ್ದು ಮತ್ತು ಕೈ ಸಾಲವಾಗಿ 4 ರಿಂದ 5 ಲಕ್ಷ ರೂ. ಸಾಲ ಮಾಡಿದ್ದಾನೆ. ಆದರೆ ಬೆಳೆ ಕೈ ಕೊಟ್ಟಿದ್ದರಿಂದ ನಷ್ಟವುಂಟಾಗಿತ್ತು. ಇದರಿಂದ ಬೇಸತ್ತು ಭಾನುವಾರ ಮನೆಯಲ್ಲಿಯೇ ಕಳೆನಾಶಕ ಸೇವಿಸಿದ್ದಾನೆ. ಕೂಡಲೇ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.