ಕೆ.ಎಂ. ಇಂದುಕುಮಾರ್‌ಗೆ ಶ್ರೀ ಶಿವಲಿಂಗಶ್ರೀ ಪ್ರಶಸ್ತಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಮಕರ ಸಂಕ್ರಾಂತಿಯ ದಿನ ಕೋಣಂದೂರು ಬೃಹನ್ಮಠವು ಕೊಡಮಾಡುವ 2026ನೇ ಸಾಲಿನ ಶ್ರೀ ಶಿವಲಿಂಗಶ್ರೀ ಪ್ರಶಸ್ತಿಗೆ ದಾವಣಗೆರೆ ಜಿಲ್ಲೆ ಅತ್ತಿಗೆರೆ ಗ್ರಾಮದ ಅಭಿಯಂತರ ಕೆ.ಎಂ.ಇಂದುಕುಮಾರ್ ಆಯ್ಕೆಯಾಗಿದ್ದಾರೆ ಎಂದು ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಪ್ರಕಟಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಗ್ರಾಮದ ತಂದೆ ಕೆ.ಮಲ್ಲಿಕಾರ್ಜುನಪ್ಪ ತಾಯಿ ರುದ್ರಮ್ಮ ಎಂಬುವರ 8 ಜನ ಮಕ್ಕಳಲ್ಲಿ ಕಿರಿಯ ಮಗನಾಗಿ 1980 ರಲ್ಲಿ ಜನಿಸಿದವರಾದ ಇಂದುಕುಮಾರ್ ತುಂಬು ಕುಟುಂಬದ ಸದಸ್ಯರಾಗಿ 1 ರಿಂದ 7ನೇ ತರಗತಿ ಹಾಗೂ 8 ರಿಂದ 10 ತರಗತಿಯವರೆಗೆ ಸ್ವಗ್ರಾಮದ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಶಿಕ್ಷಣವನ್ನು ಪೂರೈಸಿ ನಂತರ ಬೆಂಗಳೂರಿನ ಬಿಇಐ ಪಾಲಿಟಿಕ್ನಿಕ್ ಕಾಲೇಜ್‌ನಲ್ಲಿ ಡಿಪ್ಲೋಮಾ (ಸಿವಿಲ್) ಉನ್ನತ ಶ್ರೇಣಿಯಲ್ಲಿ 2001 ರಲ್ಲಿ ತೇರ್ಗಡೆಯಾಗಿ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಬಿಇ (ಸಿವಿಲ್) 2004 ರಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರಾಗಿ ವಿದ್ಯಾಭ್ಯಾಸದ ಜೊತೆ ಜೊತೆಗೆ ವೃತ್ತಿಯನ್ನು ಮೈಗೊಡಿಸಿಕೊಂಡು ಬಂದವರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ 10 ವರ್ಷಗಳ ಕಾಲ ವಾಸದ ಮನೆ ಸಂಕೀರ್ಣ ಕಟ್ಟಡಗಳ ಅಂದಾಜು ಪಟ್ಟಿ ವಿನ್ಯಾಸಗೊಳಿಸುವ ಕ್ರಿಯೆಯೊಂದಿಗೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ವೃತ್ತಿ ಜೀವನದ ಅನುಭವವನ್ನು ಪಡೆದುಕೊಂಡವರಾಗಿದ್ದಾರೆ.

ನಂತರದ 2009 ರಲ್ಲಿ ತಮ್ಮ ಸೇವಾನುಭವ ಹಾಗೂ ಶ್ರದ್ದಾಪೂರ್ವಕ ಕರ್ತವ್ಯಕ್ಕೆ ಪೂರಕವಾಗಿ ಇವರಿಗೆ ಸರ್ಕಾರಿ ಸೇವೆ ದೊರೆತು ಸಹಾಯಕ ಅಭಿಯಂತರಾಗಿ ನೇಮಕಗೊಂಡಿದ್ದು ತಮ್ಮ ಶ್ರಮ ದಕ್ಕಿದ ಪ್ರತಿಫಲವಾಗಿ ಪರಿಣಮಿಸಿದ್ದು ಸಂತಸದ ಸಂಗತಿಯಾಗಿದೆ.

ಬಿಜಾಪುರ ಜಿಲ್ಲೆಯ ಕೃಷ್ಣ ಭಾಗ್ಯ ಜಲ ನಿಗಮ ಇಲಾಖೆಯ ಅಡಿಯಲ್ಲಿ ಹಲವು ವರ್ಷಗಳ ಕಾಲ ಸೇವಿ ಸಲ್ಲಿಸ ಜೊತೆಗೆ ಇಂಡಿ ಏತ ನೀರಾವರಿ ಕಾಲುವೆಯಿಂದ 6800 ಹೆಕ್ಟರ್ ಪ್ರದೇಶದ ಜಮೀನಿಗೆ ನೀರಾವರಿ ಕಲಿಸಿ ನಂತರದ ದಿನಗಳಲ್ಲಿ 2016 ರಲ್ಲಿ ಎತ್ತಿನಹೊಳೆ ಯೋಜನೆ ಅರಸಿಕೆರೆ ಹಾಸನಕ್ಕೆ ವರ್ಗಾವಣೆಗೊಂಡು 2025 ರಲ್ಲಿ ಪದೋನ್ನತಿ ಹೊಂದಿ ಇದೇ ಕಛೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.

ಎತ್ತಿನಹೊಳೆಯ ಪ್ರಾಥಮಿಕ ಹಂತ ಸರ್ವೇ ಕಾರ್ಯದಿಂದ 45 ಕಿ.ಮೀ.ಉದ್ದದ ನಾಲೆಯನ್ನು ನಿರ್ಮಾಣ ಮಾಡುವುದರೊಂದಿಗೆ ಹತ್ತು ವರ್ಷಗಳ ಕಾಲ ಸತತ ತಮ್ಮ ಅನುಭವ ಹಾಗೂ ಶ್ರಮದಾನದಿಂದ ಆ ಒಂದು ಕಾರ್ಯವನ್ನು ಯಶಸ್ವಿ ನಿರ್ವಹಿಸುತ್ತಿದ್ದಾರೆ.

ತಮ್ಮ ಪ್ರಾಮಾಣಿಕ ವೃತ್ತಿ ಜೀವನದ ಸೇವಾ ಘನತೆಗೆ ಹಾಗೂ ತಮ್ಮ ನಿರಂತರ ಕ್ರಿಯಾಶೀಲ ಜೀವನದ ವ್ಯಕ್ತಿತ್ವಕ್ಕೆ ಕೋಣಂದೂರು ಶ್ರೀಶಿವಲಿಂಗೇಶ್ವರ ಬೃಹನ್ಮಠದಿಂದ ಪ್ರತಿವರ್ಷ ಕೊಡ ಮಾಡುವ ಶ್ರೀಶಿವಲಿಂಗಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ವೃತ್ತಿ ಸೇವಾ ಧುರೀಣ ಎಂಬ ಅಭಿದಾನದೊಂದಿಗೆ ತಮ್ಮನ್ನು ಇದೇ ಜನವರಿ 14 ರಂದು ಮಕರ ಸಂಕ್ರಾಂತಿ ದಿನ ಹರಸಿ ಆಶೀರ್ವದಿಸಿ ಅಭಿನಂದಿಸಲಿದ್ದಾರೆ.

Leave a Comment