RIPPONPETE ; ಇದೇ ಬರುವ ನವೆಂಬರ್ 7 ಮತ್ತು 8 ರಂದು ಕೋಣಂದೂರು ಬೃಹನ್ಮಠದಲ್ಲಿ ನಡೆಯುವ ನೂತನವಾಗಿ ನಿರ್ಮಿಸಿರುವ ಶಿಲಾಮಂಟಪ ಉದ್ಘಾಟನೆ, ಕರ್ತೃಗದ್ದುಗೆ ಲಿಂಗ ಪ್ರತಿಷ್ಟಾಪನೆ, ಗುರುನಿವಾಸ ಲೋಕಾರ್ಪಣೆ, ಚಂದ್ರಶಾಲೆ ಉದ್ಘಾಟನೆ ಮತ್ತು ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಐತಿಹಾಸಿಕ ಗುರು ವಿರಕ್ತರ ಸಮಾಗಮದ ಧರ್ಮ ಜಾಗೃತಿ ಕಾರ್ಯಕ್ರಮದ ಕುರಿತು ಭಕ್ತ ಸಮುದಾಯದವರ ಮೂಲಕ ಸಲಹೆ ಸೂಚನೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಮಹಿಳೆಯರ ಪೂರ್ವಭಾವಿ ಸಭೆಯು ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ಜರುಗಿತು.
ಇದೇ ಧರ್ಮ ಜಾಗೃತಿ ಸಭೆಯಲ್ಲಿ 1008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಮತ್ತು ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಇನ್ನಿತರ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಕುರಿತು ಚರ್ಚಿಸುವ ಮೂಲಕ ತಮ್ಮಗಳ ಸಲಹೆ ಸೂಚನೆಯನ್ನು ಪಡೆಯಲು ಈ ಸಭೆಯನ್ನು ಆಯೋಸಲಾಗಿದೆ ಎಂದು ಶ್ರೀಗಳು ತಿಳಿಸುತ್ತಿದ್ದಂತೆ ಸಾಕಷ್ಟು ಮಹಿಳೆಯವರು ಹುಮ್ಮಸ್ಸಿನಿಂದ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ತಮಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಕೆ.ಆರ್.ಪ್ರಕಾಶ್, ಎಂ.ಡಿ.ಇಂದ್ರಮ್ಮ ಭೀಮರಾಜ್, ಆನೆಗದ್ದೆ ಯಶೋಧ ಮಲ್ಲಪ್ಪಗೌಡ, ಗವಟೂರು ಯಶೋಧ ಈಶ್ವರಪ್ಪಗೌಡ, ಲತಾ ಚಂದ್ರಶೇಖರಯ್ಯ, ವಾಣಿ ಈಶ್ವರಪ್ಪ ಹಾರೋಹಿತ್ತಲು, ಶಶಿಕಲಾ ಮಲ್ಲಪ್ಪ, ಶಕುಂತಲಾ ಧರ್ಮರಾಜ್, ಪಾರ್ವತಮ್ಮ ಜಯಣ್ಣ, ಚಂದ್ರಕಲಾ ಕಂಕಳ್ಳಿ, ಆರ್.ಡಿ.ಶೀಲಾ, ಕೆ.ಡಿ.ಶ್ವೇತಾ, ದೀಕ್ಷಾ, ಕೆ.ಡಿ.ದೀಪು, ಮಿತ್ರಆಶೋಕ, ವಾಣಿ ಶಿವಪ್ರಕಾಶ, ಅನುಷಾ ಚಂದಳ್ಳಿ, ಇನ್ನಿತರ ಹಲವು ಗ್ರಾಮಗಳ ಮಹಿಳಾ ಭಕ್ತರು ಪಾಲ್ಗೊಂಡಿದರು.
ಗಣಪತಿಗೆ ಮಾಜಿ ಸಚಿವ ಹರತಾಳು ಹಾಲಪ್ಪನವರಿಂದ ವಿಶೇಷ ಪೂಜೆ
RIPPONPETE ; ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಟಾಪಿಸಲಾಗಿರುವ ಗಣಪತಿಗೆ ಮಾಜಿ ಸಚಿವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಎನ್.ಸತೀಶ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಆರ್.ಟಿ.ಗೋಪಾಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಎ.ಟಿ. ನಾಗರತ್ನ ನಾಗರಾಜ್, ಪದ್ಮಾ ಸುರೇಶ್, ರೇಖಾ ರವಿ, ಅಶ್ವಿನಿ ರವಿಶಂಕರ್, ಸುದೀರ್ ಪಿ, ಮುರುಳಿ ಕೆರೆಹಳ್ಳಿ, ರಚನಾ, ಜಿ.ಡಿ.ಮಲ್ಲಿಕಾರ್ಜುನ, ಇನ್ನಿತರ ಮುಖಂಡರು ಹಾಜರಿದ್ದರು.