RIPPONPETE ; ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಕೂಳೆಪಂಚಮಿಯ ಅಂಗವಾಗಿ ಸಂಭ್ರಮ ಸಡಗರದೊಂದಿಗೆ ಅದ್ಧೂರಿ ಜಾತ್ರೋತ್ಸವ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣ ಭಟ್ ಮತ್ತು ಕಿರಣ್ ಭಟ್ ಪುರೋಹಿತತ್ವದಲ್ಲಿ ದೇವರಿಗೆ ಎಳನೀರು ಅಭಿಷೇಕ, ಪವಮಾನ ಪೂಜೆಯೊಂದಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಿತು.
ಮಳೆಗಾಲದ ನಾಗರಪಂಚಮಿಯಲ್ಲಿ ಹರಕೆ ಮಾಡಿಕೊಂಡವರು ಬಂದು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಸಮರ್ಪಿಸಿ ಹಣ್ಣು-ಕಾಯಿ ಕೊಟ್ಟು ದೇವರ ದರ್ಶನಾರ್ಶೀವಾದ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಗೇರುಗಲ್ಲು, ಹೆಚ್.ಎಂ.ವರ್ತೇಶ್ ಗೌಡ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಕೂಳೆ ಪಂಚಮಿಯ ಅಂಗವಾಗಿ ಹುಂಚ, ಬಿಲ್ಲೇಶ್ವರ, ಕೋಣಂದೂರು, ಹೊಸನಗರ ಆನೆಗದ್ದೆ, ಶೆಟ್ಟಿಬೈಲು, ಸಮಟಗಾರು, ಹುಗುಡಿ, ಮಳಲಿಕೊಪ್ಪ, ಅಮೃತ, ಹುಂಚದಕಟ್ಟೆ, ವಾಲೆಮನೆ, ಸೊನಲೆ, ಹರಿದ್ರಾವತಿ ಮಾರುತಿಪುರ, ಹುಂಚರೋಡ್, ಹಿರೇಬೈಲು, ಹೆದ್ದಾರಿಪುರ, ಗರ್ತಿಕೆರೆ, ಬಿದರಹಳ್ಳಿ ಮೂಗುಡ್ತಿ, ತಳಲೆ, ಕಳಸೆ, ಬೆಳ್ಳೂರು, ಲಕ್ಕವಳ್ಳಿ, ಆಲವಳ್ಳಿ, ಕೆಂಚನಾಲ, ಕಮದೂರು, ಮಸರೂರು, ಆನಂದಪುರ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಕೊಪ್ಪ, ಶಿವಮೊಗ್ಗ ಸೇರಿದಂತೆ ನಾಡಿನ ವಿವಿಧಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬಂದು ದೇವರ ದರ್ಶನ ಪಡೆದರು.