ನಾಗರಹಳ್ಳಿಯಲ್ಲಿ ಜ. 4 ರಂದು ಕೂಳೆಪಂಚಮಿ ಜಾತ್ರೋತ್ಸವ

Written by malnadtimes.com

Published on:

RIPPONPETE ; ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಜನವರಿ 4 ರಂದು ಕೂಳೆಪಂಚಮಿ ಜಾತ್ರೋತ್ಸವ ನಡೆಯಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಗೇರುಗಲ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಶ್ರೀ ನಾಗೇಂದ್ರಸ್ವಾಮಿಯ ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಮೂರ್ತಿ ನಾಗೇಂದ್ರಸ್ವಾಮಿ ದೇವರ ಜಾತ್ರಾಮಹೋತ್ಸವವು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತದೆ. ನಾಗರ ಪಂಚಮಿಯ ಜಾತ್ರಾ ಮಹೋತ್ಸವವು ಮಳೆಗಾಲದಲ್ಲಿ ಆಗಸ್ಟ್ ಹಾಗೂ ಬೇಸಿಗೆಯಲ್ಲಿ ಜನವರಿಯಲ್ಲಿ ಆಚರಿಸುವುದು ಇಲ್ಲಿನ ವಿಶೇಷ.

ವಿವಾಹವಾಗದವರು ಮತ್ತು ಸಂತಾನಭಾಗ್ಯ ಹೀಗೆ ಹಾಕಿದ ಬೆಳೆಗೆ ರೋಗ ಹರಡದಂತೆ ರಕ್ಷಣೆ ಮಾಡುವಂತೆ ಅನಾರೋಗ್ಯ ಪೀಡಿತರನ್ನು ರಕ್ಷಿಸುವಂತೆ ಹತ್ತು ಹಲವು ಬೇಡಿಕೆ ಹೊತ್ತು ಬರುವ ಭಕ್ತರನ್ನು ಹರಸುವ ಕರುಣಾಮೂರ್ತಿ ನಾಗೇಂದ್ರಸ್ವಾಮಿ. ಜನವರಿ 4 ರಂದು ಬೆಳಗ್ಗೆ ನಾಗೇಂದ್ರಸ್ವಾಮಿಗೆ ಪಂಚಾಮೃತ ಅಭೀಷೇಕ, ಪವಮಾನ ಪೂಜೆ, ಎಳನೀರು ಅಭಿಷೇಕ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಜರುಗಲಿದೆ ಎಂದು ತಿಳಿಸಿದರು.

Leave a Comment