Labour card:ಸರ್ಕಾರವು ನಮ್ಮ ರಾಜ್ಯದಲ್ಲಿ ಬಡತನದಲ್ಲಿರುವ ಕಷ್ಟಪಡುತಿರುವ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಲೇಬರ್ ಕಾರ್ಡ್ ಇರುವ ಜನರಿಗೆ ಸರ್ಕಾರವು ಉಚಿತ ಬೈಕ್ ಹಾಗೂ ಲ್ಯಾಪ್ ಟಾಪ್ ಎರಡನ್ನು ವಿತರಣೆ ಮಾಡುವುದಕ್ಕೆ ಸರ್ಕಾರ ಮುಂದಾಗಿದ್ದು, ಲೇಬರ್ ಕಾರ್ಡ್ ಹೊಂದಿರುವವರು ಈ ರೀತಿ ಅರ್ಜಿ ಸಲ್ಲಿಸಿ, ಸೌಲಭ್ಯವನ್ನು ಪಡೆಯಬಹುದು.
Labour card
ದಿನಗೂಲಿ ಕೆಲಸ ಮಾಡಿತ್ತಿರುವವರಿಗೆ ಕಾರ್ಮಿಕ ಇಲಾಖೆ ಇಂದ ಲೇಬರ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಈ ಒಂದು ಕಾರ್ಡ್ ಅನ್ನು ಇಲಾಖೆ ಇಂದ ಪಡೆದಿರುವವರ ಕುಟುಂಬದಲ್ಲಿ ವಿಶೇಷಚೇತನರು ಇದ್ದರೆ, ಅವರಿಗೆ ಉಚಿತವಾಗಿ ಮೋಟರ್ ಚಾಲಿತ ತ್ರಿಚಕ್ರ ಬೈಕ್ ನೀಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದ್ದು, ಈ ಒಂದು ಕಾರ್ಡ್ ಇದ್ದರೆ ವಿಶೇಷಚೇತನರು ಈ ಸೌಲಭ್ಯಕ್ಕೆ ಅಪ್ಲೈ ಮಾಡಿ, ಉಚಿತವಾಗಿ ವಾಹನವನ್ನು ಪಡೆಯಬಹುದು.ಇವರು ಜೀವನ ಕಟ್ಟಿಕೊಳ್ಳಲು ಸಹಾಯ ಆಗುತ್ತದೆ.
ಇನ್ನೊಂದು ವಿಶೇಷತೆ ಏನು ಎಂದರೆ, ಲೇಬರ್ ಕಾರ್ಡ್ ಹೊಂದಿರುವ ವ್ಯಕ್ತಿಗಳ ಕುಟುಂಬದಲ್ಲಿ ವಿದ್ಯಾರ್ಥಿಗಳು ಇದ್ದರೆ, ಲೇಬರ್ ಕಾರ್ಡ್ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಕೊಡುವ ನಿರ್ಧಾರವನ್ನು ಸರ್ಕಾರ ಮಾಡಿದ್ದು, ಲೇಬರ್ ಕಾರ್ಡ್ ಹೊಂದಿರುವವರ ಕುಟುಂಬದಲ್ಲಿ ಇರುವ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಲ್ಯಾಪ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಸಿಗಲಿದ್ದು, ಆಗತ್ಯವಿರುವ ಎಲ್ಲಾ ದಾಖಲೆಗಳ ಜೊತೆಗೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇನ್ನು ತಡ ಮಾಡದೆ ಅರ್ಜಿ ಸಲ್ಲಿಸಿ ಸರ್ಕಾರದ ಈ ಸೌಲಭ್ಯ ಪಡೆದುಕೊಳ್ಳಿ.
Read More
ರೈತರಿಗೆ ಸಿಹಿಸುದ್ದಿ, 14 ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
ಬೆಲೆ ಏರಿಕೆ ಕುರಿತು ಬಿಜೆಪಿ ಪ್ರತಿಭಟನೆ ಹಾಸ್ಯಾಸ್ಪದ ; ಶಾಸಕ ಬೇಳೂರು ಗೋಪಾಲಕೃಷ್ಣ