THIRTHAHALLI ; ತನ್ನ ಮೊನಚು ಬರವಣಿಗೆಯ ಮೂಲಕ ಮನೆಮಾತಾಗಿದ್ದ ಲಕ್ಷ್ಮೀಶ್ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಾ.ಸು. ಲಕ್ಷ್ಮೀಶ್ (62) ಮಂಗಳವಾರ ನಿಧನರಾದರು.
ಸೋಮವಾರ ರಾತ್ರಿ ಬ್ರೈನ್ ಹ್ಯಮರೇಜ್ ಆಗಿದೆ. ಕೂಡಲೇ ತೀರ್ಥಹಳ್ಳಿಯ ಕಿರಣ್ ಹೆಲ್ತ್ ಕೇರ್ ಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಲಕ್ಷ್ಮೀಶ್ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತೀರ್ಥಹಳ್ಳಿಯ ಬೊಬ್ಬಿ ಸಮೀಪದ ಮಾಕೋಡಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬೆಳಗ್ಗೆ ತೀರ್ಥಹಳ್ಳಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಿತು.