LED Bulb | ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡ ವಾಹನಗಳ ಮಾಲೀಕರೇ ದಂಡ ಕಟ್ಟಲು ಸಜ್ಜಾಗಿ !

Written by Mahesha Hindlemane

Published on:

HOSANAGARA | ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿ ವಾಹನಗಳನ್ನು ಓಡಿಸುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಇಂತಹ ವಾಹನಗಳ ಮಾಲೀಕರ ವಿರುದ್ಧ ಕೇಸ್ ಮತ್ತು ದಂಡ ನಂತರ ಇದಕ್ಕೂ ಬಗ್ಗದಿದ್ದರೇ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಜುಲೈ 1ರಿಂದ ಹೊಸನಗರ ತಾಲ್ಲೂಕಿನಲ್ಲಿ ಕಟ್ಟುನಿಟ್ಟಾಗಿ ಈ ನಿಯಮ ಪಾಲಿಸಲಾಗುವುದು ಎಂದು ಇಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ರಸ್ತೆ ಅಪಘಾತಗಳನ್ನು ತಪ್ಪಿಸಲು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿ ನೀಡಿರುವ ದೀಪಗಳನ್ನು (ಹೆಡ್‌ಲೈಟ್) ಮಾತ್ರ ವಾಹನಗಳಿಗೆ ಅಳವಡಿಸಬೇಕು. ಎಲ್‌ಇಡಿ ನಿರ್ಬಂಧಿಸಿರುವ ಬಗ್ಗೆ ಆದೇಶ ಹೊರಡಿಸಲಾಗಿದ್ದು, ಈ ನಿಯಮ ಪಾಲನೆ ಆಗದಿದ್ದರೆ ಜುಲೈನಿಂದ ದಂಡ ಹೇರಿಕೆ ಪ್ರಕ್ರಿಯೆ ಆರಂಭವಾಗಲಿದೆ. ದಂಡ ವಿಧಿಸಿದ ನಂತರವೂ ಉಲ್ಲಂಘನೆ ಮುಂದುವರೆದರೆ ಅಂತಹ ವಾಹನವನ್ನು ಜಪ್ತಿ ಮಾಡಲಾಗುವುದು ಎಂದರು.

ಎಲ್‌ಇಡಿ ಹೆಡ್‌ಲೈಟ್ ಹೊಂದಿರುವ ವಾಹನಗಳನ್ನು ಒಳಗೊಂಡಂತೆ ಹಲವಾರು ಅಪಘಾತಗಳ ಉದಾಹರಣೆಗಳಿವೆ. ಈ ಬೆಳಕಿನ ಪ್ರಕಾಶತೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಖಂಡಿತವಾಗಿಯೂ ತಬ್ಬಿಬ್ಬುಗೊಳಿಸುತ್ತದೆ. ಈ ಕಾರಣಕ್ಕಾಗಿ ಎಲ್‌ಇಡಿ ದೀಪಗಳ ಬಳಕೆಯನ್ನು ನಿಷೇಧಿಸಲಾಗಿದೆ. ಇನ್ನೂ ಮುಂದೆ ಇದನ್ನು ಮೊದಲ ಹಂತದಲ್ಲಿ 500 ರೂ. ದಂಡವನ್ನು ಪರಿಗಣಿಸಲಾಗುತ್ತದೆ. ನಂತರ ಪುನಃ ಬಳಕೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

READ MORE:ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ Farmers FID ಹೀಗೆ ಚೆಕ್ ಮಾಡಿ

Leave a Comment