ಶಿವಮೊಗ್ಗ–ಭದ್ರಾವತಿ ರೈಲು ಮಾರ್ಗದಲ್ಲಿ ಲೆವೆಲ್ ಕ್ರಾಸಿಂಗ್ ಪರಿಶೀಲನೆ: ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಿ ಮಾರ್ಗ ಪ್ರಕಟ

Written by Koushik G K

Published on:

ಶಿವಮೊಗ್ಗ:ಶಿವಮೊಗ್ಗ–ಭದ್ರಾವತಿ ನಡುವಿನ ರೈಲು ಮಾರ್ಗದ ಲೆವೆಲ್ ಕ್ರಾಸಿಂಗ್‌ಗಳ ತಾಂತ್ರಿಕ ಪರಿಶೀಲನೆ ಮತ್ತು ಎಲ್‌ಸಿ ಓಪನ್ ಪರೀಕ್ಷೆಗಾಗಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಪರಿಶೀಲನೆ ಹಿನ್ನೆಲೆಯಲ್ಲಿ ಎಲ್‌ಸಿ ನಂ. 42, 46 ಮತ್ತು 47 ಮಾರ್ಗಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.

ಬದಲಿ ಮಾರ್ಗಗಳ ವಿವರ:

1️⃣ ಎಲ್‌ಸಿ 43 – ಯಲವಟ್ಟಿ ರಸ್ತೆ:ಅಕ್ಟೋಬರ್ 28ರ ಬೆಳಿಗ್ಗೆ 8 ಗಂಟೆಯಿಂದ ಅಕ್ಟೋಬರ್ 29ರ ಸಂಜೆ 6 ಗಂಟೆಯವರೆಗೆ ಈ ರಸ್ತೆ ಮುಚ್ಚಲ್ಪಡಲಿದೆ. ಬದಲಿ ಮಾರ್ಗವಾಗಿ ಎಲ್‌ಸಿ 46 ಮುಖಾಂತರ ಹೊಸೊಡಿ ರಸ್ತೆ–ಯಲವಟ್ಟಿ ರಸ್ತೆ ಸಂಪರ್ಕ ಮಾರ್ಗ ಬಳಸಬಹುದು.

2️⃣ ಎಲ್‌ಸಿ 46 – ಚಿತ್ರದುರ್ಗ ರಸ್ತೆ:ಅಕ್ಟೋಬರ್ 30ರ ಬೆಳಿಗ್ಗೆ 8ರಿಂದ ಅಕ್ಟೋಬರ್ 31ರ ಸಂಜೆ 6ರವರೆಗೆ ವಾಹನ ಸಂಚಾರ ನಿಷೇಧ. ಬದಲಿ ಮಾರ್ಗವಾಗಿ ಹೊಸದಾಗಿ ನಿರ್ಮಿಸಲಾದ ಮೇಲ್ಸೇತುವೆ ಮತ್ತು ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗ ಬಳಸಬಹುದು.

3️⃣ ಎಲ್‌ಸಿ 47 – ಮಲ್ಲೇಶ್ವರನಗರ ರಸ್ತೆ:ನವೆಂಬರ್ 2ರ ಬೆಳಿಗ್ಗೆ 8ರಿಂದ ನವೆಂಬರ್ 3ರ ಸಂಜೆ 6ರವರೆಗೆ ಸಂಚಾರ ನಿಷೇಧ. ಬದಲಿ ಮಾರ್ಗವಾಗಿ ಮಲ್ಲೇಶ್ವರನಗರ ರಸ್ತೆ–ಹೊನ್ನಾಳಿ ರಸ್ತೆ–ಸಂಗೊಳ್ಳಿ ರಾಯಣ್ಣ ಸರ್ಕಲ್–ಶಂಕರಮಠ ಸಂಪರ್ಕ ಮಾರ್ಗ ಬಳಸಬಹುದು.

🛑 ಭಾರಿ ವಾಹನಗಳಿಗೆ ನಿರ್ಬಂಧ:

ಮಲ್ಲೇಶ್ವರನಗರ ರಸ್ತೆಯು ಕಚ್ಚಾ ಮಣ್ಣಿನ ರಸ್ತೆಯಾಗಿರುವುದರಿಂದ, ಅಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರ ಅನುಮತಿ ನೀಡಲಾಗಿದ್ದು, ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಸಾರ್ವಜನಿಕರಿಗೆ ವಿನಂತಿ:

ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಬೇಕಿರುವುದರಿಂದ, ಈ ಅವಧಿಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಈ ಆದೇಶವನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 115ರನ್ವಯ ಹೊರಡಿಸಲಾಗಿದ್ದು, ಪರಿಷ್ಕೃತ ದಿನಾಂಕಗಳಲ್ಲಿಯೇ ಬದಲಿ ಮಾರ್ಗಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.

ಸಾಗರ: ಬಂಗಾರಪ್ಪ ಜನ್ಮದಿನದ ಅಂಗವಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

Leave a Comment