ಶಿವಮೊಗ್ಗ ಸುದ್ದಿ

ಲಿಂಗನಮಕ್ಕಿ ಜಲಾಶಯ : ಅಣೆಕಟ್ಟಿನ 11 ಗೇಟ್‌ಗಳನ್ನು ತೆರೆದು 14,500 ಕ್ಯೂಸೆಕ್ ನೀರು ಬಿಡುಗಡೆ

Linganamakki Dam:ಮಳೆಯ ಹಿನ್ನಲೆಯಲ್ಲಿ ಲಿಂಗನಮಕ್ಕಿ ಜಲಾಶಯವು ತನ್ನ ಸಂಪೂರ್ಣ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ, ಅಣೆಕಟ್ಟಿನ 11 ಗೇಟ್‌ಗಳನ್ನು ಅಧಿಕಾರಿಗಳು ತೆರೆದಿದ್ದಾರೆ. ಇದರ ಪರಿಣಾಮವಾಗಿ, ಪ್ರತಿ ಸೆಕೆಂಡಿಗೆ ಸುಮಾರು 14,500 ಕ್ಯೂಸೆಕ್ ನೀರು ಜಲಾಶಯದಿಂದ ಹೊರ ಬಿಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/16Zs5jgjqP/

ಲಿಂಗನಮಕ್ಕಿ ಜಲಾಶಯದ 11 ಗೇಟ್‌ಗಳನ್ನು ತೆರೆಯುವ ಮೂಲಕ ಬಿಡುಗಡೆಗೊಂಡ 14,500 ಕ್ಯೂಸೆಕ್ ನೀರು, ಶರಾವತಿ ನದಿಯಲ್ಲಿ ಹರಿದು ಸುಮಾರು 2 ಗಂಟೆಗಳ ಬಳಿಕ ಜೋಗ್ ಜಲಪಾತಕ್ಕೆ ತಲುಪಲಿದೆ.ಅಂದಾಜು ಪ್ರಕಾರ, ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ನೀರು ಜೋಗ್ ಜಲಪಾತ ತಲುಪಲಿದೆ.

ಇಂದು (19-08-2025, 08:00 ಗಂಟೆಗೆ):

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
  • ನೀರಿನ ಮಟ್ಟ: 1816.20 ಅಡಿ (ಗರಿಷ್ಠ 1819 ಅಡಿ)
  • ಒಳಹರಿವು (Inflow): 48,393 ಕ್ಯೂಸೆಕ್‌
  • ನೇರಿನ ಸಂಗ್ರಹ (Live Capacity): 93.87 %
  • ಕಳೆದ 24 ಗಂಟೆಯಲ್ಲಿ ನೀರಿನ ಏರಿಕೆ: 1.15 ಅಡಿ

ಹಿಂದಿನ ವರ್ಷ ಇದೇ ದಿನ (19-08-2024, 08:00 ಗಂಟೆಗೆ):

  • ನೀರಿನ ಮಟ್ಟ: 1816.80 ಅಡಿ
  • ನೇರಿನ ಸಂಗ್ರಹ (Live Capacity): 95.15 %

ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡುವುದರಿಂದ ಶರಾವತಿ ನದಿಯ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ತೀರಪ್ರದೇಶದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು, ಜನ ಸಾಮಾನ್ಯರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ಎಚ್ಚರಿಸಲಾಗಿದೆ. ಜಲಾಶಯದಲ್ಲಿ ಇನ್ನೂ ಮಳೆನೀರು ಸೇರುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಹರಿವು ಹೆಚ್ಚುವ ಸಾಧ್ಯತೆಯೂ ಇರುವುದಾಗಿ ಎಚ್ಚರಿಕೆ ನೀಡಲಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650