HOSANAGARA ; ತಾಲ್ಲೂಕಿನಲ್ಲಿ ನಕಲಿ ಹಕ್ಕುಪತ್ರಗಳ ಸಂಖ್ಯೆ ಹೆಚ್ಚಾಗಿದ್ದು, ಅದು ಅಲ್ಲದೇ ರಾಜೇಂದ್ರ ಎಂಬುವವರ ಬಳಿ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಸದಸ್ಯರ ಸೀಲ್‌ಗಳು ಹಾಗೂ ನಕಲಿ ಹಕ್ಕುಪತ್ರಗಳು, ನೈಜತೆ ಪ್ರಮಾಣ ಪತ್ರ, ನಕಾಶೆಗಳು ತಹಶೀಲ್ದಾರ್‌ರವರು ತನಿಖೆ ನಡೆಸಿದಾಗ ಸಿಕ್ಕಿರುವುದರಿಂದ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಗ್ರಾಮ ಪಮಚಾಯತಿಗೆ ಸೇರಿರುವ ಎಲ್ಲ ಗ್ರಾಮದ ಬಗ್ಗೆ ಕಂದಾಯ ಇಲಾಖೆಗೆ ಪತ್ರ ರವಾನೆ ಮಾಡಿದ್ದು 2005ರಿಂದ 2024ರವರೆಗೆ ಹೊಸನಗರ ಕಂದಾಯ ಇಲಾಖೆಯಿಂದ ಎಷ್ಟು ಜನರಿಗೆ ಹಕ್ಕು ಪತ್ರ ನೀಡಿದ್ದೀರಿ ಅದರ ನಕಾಶೆ ಹಕ್ಕುಪತ್ರದ ನಕಲು ಹಾಗೂ ನೈಜತೆ ಪ್ರಮಾಣ ಪತ್ರಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
ನಕಲಿ, ಅಸಲಿ ಹಕ್ಕುಪತ್ರ ಕಂಡು ಹಿಡಿಯಲು ಸಹಕಾರಿ : ಪ್ರವೀಣ್‌ಕುಮಾರ್
ಹೊಸನಗರ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯತಿಯ ಅಧ್ಯಕ್ಷ ಸದಸ್ಯರ ಹಾಗೂ ಪಿಡಿಓಗಳ ಸೀಲ್‌ಗಳು ರಾಜೇಂದ್ರರವರ ಬಳಿ ಸಿಕ್ಕಿದ್ದು ಇದರ ಜೊತೆಗೆ ನಕಲಿ ಹಕ್ಕು ಪತ್ರಗಳು ಸಿಕ್ಕಿರುತ್ತದೆ. ನಕಲಿ ಹಕ್ಕುಪತ್ರಗಳು ಸಿಕ್ಕಿರುವುದರಿಂದ ಅದು ಗ್ರಾಮ ಪಂಚಾಯತಿಗಳಿಗೆ ನೀಡಿ ಕೆಲವರು ಖಾತೆ ಮಾಡಿಸಿರಬಹುದು? ಎಂಬ ಅನುಮಾನ ಕಾಡುತ್ತಿದ್ದು ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳ ಮಾಹಿತಿ ಸಿಕ್ಕಿದರೆ ನಕಲಿ ಖಾತೆ ಮಾಡಿಸಿರುವವರ ಖಾತೆಗಳನ್ನು ರದ್ದುಪಡಿಸಲು ಅನುಕೂಲವಾಗುತ್ತದೆ ಮತ್ತು ಅಸಲಿ, ನಕಲಿ ಯಾವುದು ಎಂದು ತಿಳಿಯಲಿದೆ ಗ್ರಾಮಸ್ಥರಿಗೂ ಇದರಿಂದ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಪಾರದರ್ಶಕ ಆಡಳಿತ ನಡೆಸಲು ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷ ಪ್ರವೀಣ್ ತಿಳಿಸಿದರು.
30 ಗ್ರಾ.ಪಂ.ಗಳಲ್ಲೂ ನಕಲಿ ಹಕ್ಕುಪತ್ರ ಖಾತೆಯಾಗಿರುವ ಶಂಕೆ ?
ಹೊಸನಗರ ತಾಲ್ಲೂಕಿನಲ್ಲಿ 30 ಗ್ರಾಮ ಪಂಚಾಯತಿಗಳಿದ್ದು ಈಗಾಗಲೇ ಕೆಲವರು ನಕಲಿ ಹಕ್ಕುಪತ್ರದ ಮೇಲೆ ಖಾತೆ ಮಾಡಿಸಿಕೊಂಡು ಬ್ಯಾಂಕ್ ಸಾಲವನ್ನು ಪಡೆದಿದ್ದಾರೆ ಎಂಬ ಶಂಕೆ ಮೂಡಿದ್ದು 30 ಗ್ರಾಮ ಪಂಚಾಯತಿಯ ಅಧ್ಯಕ್ಷ, ಸದಸ್ಯರು ಹಾಗೂ ಪಿಡಿಓಗಳು ಅಸಲಿ-ನಕಲಿ ಹಕ್ಕುಪತ್ರದ ಬಗ್ಗೆ ತನಿಖೆ ನಡೆಸುವುದು ಸೂಕ್ತವಾಗಿದ್ದು ಇಲ್ಲವಾದರೇ ಒಂದು ದಿನ ಪಿಡಿಓಗಳ ತಲೆದಂಡವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ? 10 ವರ್ಷದ ಈಚೆಗೆ 94ಸಿ, 94ಸಿಸಿ ಹಕ್ಕುಪತ್ರಗಳಿಗೆ ಯಾಯ್ಯಾರಿಗೆ ಖಾತೆ ಮಾಡಿಕೊಟ್ಟ ಬಗ್ಗೆ ಗ್ರಾಮ ಪಂಚಾಯತಿಯಲ್ಲಿ ದಾಖಲೆಗಳಿದ್ದು ಕಂದಾಯ ಇಲಾಖೆಯ ದಾಖಲೆಯೊಂದಿಗೆ ತಾಳೆ ನೋಡುವುದು ಸೂಕ್ತ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.