ಹೊಸನಗರ ; ಇಂದು ನಡೆಯಬೇಕಿದ್ದ ತಾಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿಯ ಸಾಮಾಜಿಕ ಪರಿಶೋಧನೆ ಮತ್ತು 15ನೇ ಹಣಕಾಸು ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯು ಕೋರಂ ಕೊರತೆ ಹಿನ್ನಲೆಯಲ್ಲಿ ಇದೇ ಮಾರ್ಚ್ 13ಕ್ಕೆ ಮುಂದೂಡಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ಜೊತೆಗೆ ಸದಸ್ಯರಾದ ಕಾಲಸಸಿ ಸತೀಶ್, ಓಂಕೇಶ್, ಶ್ರೀಧರ್, ಸವಿತಾ, ಕಾರ್ಯದರ್ಶಿ ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಯೋನಿವೃತ್ತಿ, ಬೀಳ್ಕೊಡುಗೆ ;
ಹೊಸನಗರ ; ಕರ್ನಾಟಕ ಗ್ರಾಮೀಣ
ಬ್ಯಾಂಕ್‌ನ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ನಿರಂತರ 38 ವರ್ಷಗಳ ಸೇವೆ ಸಲ್ಲಿಸಿ ಇದೇ ಫೆಬ್ರವರಿ 28ರಂದು ವಯೋ ನಿವೃತ್ತರಾದ ಸಿಬ್ಬಂದಿ ಡಿ.ಕೆ.ಸೋಮನಾಥ್ ಅವರನ್ನು ಬ್ಯಾಂಕ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.

ಸೋಮನಾಥ್ ಮೂಲತಃ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರಿನ ಸಮೀಪದ ಕಣಕಲಬೈಲು ಗ್ರಾಮದವರು.