Malenadu Rain | ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?

Written by malnadtimes.com

Published on:

SHIVAMOGGA / CHIKKAMAGALURU | ಮಲೆನಾಡಿನಾದ್ಯಂತ ಆರಿದ್ರ ಮಳೆಯಬ್ಬರ ಜೋರಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.

WhatsApp Group Join Now
Telegram Group Join Now
Instagram Group Join Now

ಶನಿವಾರ ಬೆಳಗ್ಗೆ 8:00ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಇಲ್ಲಿ ನೀಡಲಾಗಿದೆ.

Read more: ಭಾಗ್ಯಲಕ್ಷ್ಮಿ ಬಾಂಡ್ ಇದ್ದವರ ಖಾತೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಲಿದೆ 1 ಲಕ್ಷ ಹಣ !

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಮಾಸ್ತಿಕಟ್ಟೆ (ಹೊಸನಗರ) : 102
  • ಹುಲಿಕಲ್ (ಹೊಸನಗರ) : 93
  • ಯಡೂರು ಹೊಸನಗರ : 74
  • ಹೊಸೂರು-ಸಂಪೆಕಟ್ಟೆ (ಹೊಸನಗರ) : 67
  • ಕಾರ್ಗಲ್ (ಸಾಗರ) : 60
  • ಹೊಸನಗರ (ಹೊಸನಗರ) : 52
  • ಬಿದನೂರುನಗರ (ಹೊಸನಗರ) : 51
  • ನೊಣಬೂರು (ತೀರ್ಥಹಳ್ಳಿ) : 41.5
  • ಅರೇಹಳ್ಳಿ (ತೀರ್ಥಹಳ್ಳಿ) : 41
  • ಆರಗ (ತೀರ್ಥಹಳ್ಳಿ) : 38.5
  • ಕೋಡೂರು (ಹೊಸನಗರ) : 37.5
  • ಮೇಲಿನಬೆಸಿಗೆ (ಹೊಸನಗರ) : 35.5
  • ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 35
  • ನೆರಟೂರು (ತೀರ್ಥಹಳ್ಳಿ) : 34.5

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :

  • ಬಣಕಲ್ (ಮೂಡಿಗೆರೆ) : 159.5
  • ಬೆಟ್ಟಗೆರೆ (ಮೂಡಿಗೆರೆ) : 67
  • ಫಲ್ಗುಣಿ (ಮೂಡಿಗೆರೆ) : 63.5
  • ಬೇಗಾರು (ಶೃಂಗೇರಿ) : 50.5
  • ಬಾಳೂರು (ಮೂಡಿಗೆರೆ) : 44.5
  • ಶಾನುವಳ್ಳಿ (ಕೊಪ್ಪ) : 39.5
  • ಹೆಸಗಲ್ಲು(ಬೆಳಗೊಳ) (ಮೂಡಿಗೆರೆ) : 38.5
  • ನಂದಿಪುರ (ಮೂಡಿಗೆರೆ) : 35
  • ಕಮ್ಮರಡಿ (ಕೊಪ್ಪ) : 31
  • ಮಾಕೋನಹಳ್ಳಿ (ಮೂಡಿಗೆರೆ) : 31

ಲಿಂಗನಮಕ್ಕಿ ಜಲಾಶಯಕ್ಕೆ 9 ಅಡಿ ನೀರು :

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಶನಿವಾರ ಬೆಳಗ್ಗೆ 8:00 ಗಂಟೆಗೆ 1749.45 ಅಡಿ ತಲುಪಿದ್ದು ಜಲಾಶಯಕ್ಕೆ 9184 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ1740.10 ದಾಖಲಾಗಿದ್ದು ಕಳೆದ ವರ್ಷಕ್ಕಿಂತ 9 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.

Read more: SHIVAMOGGA | DCC ಬ್ಯಾಂಕ್ ಚುನಾವಣೆ, ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿಗಳು !

Leave a Comment