ಸೆ.29 ರಂದು ಬೆಂಗಳೂರಿನಲ್ಲಿ ‘ಮಲೆನಾಡು ಉತ್ಸವ’

Written by malnadtimes.com

Published on:

SHIVAMOGGA ; ಮಲೆನಾಡಿನ ಉತ್ಸವ ಈಗ ಮಹಾನಗರದಲ್ಲಿ, ಮಲೆನಾಡಿನ ಸಂಸ್ಕೃತಿ, ಆಹಾರ, ಆಚಾರ ವಿಚಾರಗಳನ್ನು ಸಂಭ್ರಮಿಸುವುದಕ್ಕಾಗಿ ಆಯೋಜಕರಾದ ರಮೇಶ್ ಬೇಗಾರ್ ಅವರ ನೇತೃತ್ವದಲ್ಲಿ ಇದೇ ಸೆಪ್ಟೆಂಬರ್ 29 ರ ಭಾನುವಾರ ಬೆಂಗಳೂರಿನ ಜಯನಗರ 7ನೇ ಹಂತದ ನ್ಯಾಷನಲ್ ಕಾಲೇಜು ಆವರಣದಲ್ಲಿರುವ ಹೆಚ್. ಎನ್ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now

ಮಲೆನಾಡಿನ ವಿಶೇಷ ಖಾದ್ಯಗಳ ಆಹಾರ ಮೇಳ, ಸಾಧಕರಿಗೆ ಸನ್ಮಾನ, ಸ್ನೇಹ ಸಮ್ಮಿಲನ ಹೀಗೇ ಹಲವಾರು ಆಕರ್ಷಣೆಯ ನಡುವೆ ನಡೆಯಲಿದೆ.

ಕಾರ್ಯಕ್ರಮಗಳು :

  • ಬೆಳಿಗ್ಗೆ 10 ಘಂಟೆಗೆ ಯಕ್ಷಗಾನ ಗಾನವೈಭವ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಮಯ್ಯರವರ ಹಾಗು ಆಯ್ದ ಕಲಾವಿದರಿಂದ.
  • ಬೆಂಗಳೂರಿನ ವ್ಯೂಹ ತಂಡದಿಂದ ನವರಸ ರಾಮಾಯಣ – ನೃತ್ಯ ರೂಪಕ ಕಾರ್ಯಕ್ರಮ.
  • ನಮ್ಮ ಮಲೆನಾಡಿನ ಶೃಂಗೇರಿ ರಂಗಮಿತ್ರ ತಂಡದಿಂದ ಪೂರ್ಣಚಂದ್ರ ತೇಜಸ್ವಿ ಅವರ ಮಲೆನಾಡು ಭಾಷೆಯ ಹಾಸ್ಯ ನಾಟಕ – ಗುಡುಗು ಹೇಳಿದ್ದೇನು.
  • ಗುತ್ತಳಿಕೆ ಕೇಶವ ಮತ್ತು ತಂಡದಿಂದ ಗಾನ ಗೌಜಿ ಗಮ್ಮತ್ತು
  • ಉಡುಪಿ ಜಿಲ್ಲೆ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಮಂದ್ರ ಬೆಳಕಿನ ಯಕ್ಷಗಾನ- ಅಭಿಮನ್ಯು ಕಾಳಗ.

ಬನ್ನಿ ನಮ್ಮ ಊರು, ನಮ್ಮ ಭಾಷೆ ನಮ್ಮ ಮಲೆನಾಡಿನ ಸೊಬಗನ್ನು ಸಂಭ್ರಮಿಸೋಣ.

Leave a Comment