HOSANAGARA ; ಶಿವಮೊಗ್ಗದಲ್ಲಿ ಶನಿವಾರ ನಡೆದ 14 ವರ್ಷ ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೊಸನಗರ ತಾಲೂಕಿನ ಸ.ಹಿ.ಪ್ರಾ. ಶಾಲೆ ಮಾರುತಿಪುರ ಶಾಲೆಯ ವಿದ್ಯಾರ್ಥಿ ಪ್ರೀತಮ್ ಎನ್. ತಟ್ಟೆ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇನ್ನೂ ಬಾಲಕಿಯರ ಕಬಡ್ಡಿ ತಂಡ ಸಹ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದು, ಐವರು ಬಾಲಕಿಯರು (ಅಮೃತ ಎಸ್, ವನಜಾಕ್ಷಿ, ದೇವಿಕಾ, ಆಶ್ವಿತಾ, ಭೂಮಿಕಾ) ಕಬಡ್ಡಿ ತಂಡದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೀತಮ್ ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಬಡೇನಕೊಪ್ಪ ನಿವಾಸಿ ರಂಜಿತ್ ಹಾಗೂ ಚೈತ್ರಾ ದಂಪತಿಗಳ ಪುತ್ರ.

ಅಭಿನಂದನೆ :
ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯ ಶಿಕ್ಷಕಿ ಭಾರತಿ ಪ್ರಕಾಶ್, ಮತ್ತು ಸಹ ಶಿಕ್ಷಕರುಗಳಾದ ಚಂದ್ರಶೇಖರ, ಪರಮೇಶ್ವರಪ್ಪ, ಅನಿತಾ, ಅತಿಥಿ ಶಿಕ್ಷಕಿಯರಾದ ಕು|| ವಿದ್ಯಾ ಎಚ್. ಎನ್. ಕು|| ಭೂಮಿಕಾ, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.