ಹೊಸನಗರ ; ದೇಶದ ಮೂಲೆ-ಮೂಲೆಗಳಲ್ಲು ಪ್ರಸರಿಸಿರುವ ಮಾರುತಿ ಸುಜುಕಿ ಅರೇನಾ ಔಟ್‌ಲೆಟ್‌ನ್ನು ಹೊಸನಗರದ ಕೆನರಾ ಬ್ಯಾಂಕ್ ಎದರಿನಲ್ಲಿರುವ ಮೀಲ್ ಈಶ್ವರಪ್ಪ ಗೌಡರವರ ಜಾಗದಲ್ಲಿ ನೂತನವಾಗಿ ಕಟ್ಟಡ ನಿರ್ಮಿಸಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಯಿತು.
ನೂತನ ಶೋ ರೂಂಗೆ ಶುಭ ಹಾರೈಸಿ ಮಾತನಾಡಿದ ಮಿಲ್ ಈಶ್ವರಪ್ಪ ಗೌಡ, ಹೊಸನಗರ ತಾಲ್ಲೂಕು ಮಲೆನಾಡು ಜೊತೆಗೆ ಹಿಂದುಳಿದ ಪ್ರದೇಶವೆಂದು ಯಾವುದೇ ಯಾವುದೇ ಕಂಪನಿಗಳು ಬರಲು ಹಿಂದೇಟು ಹಾಕುತ್ತಿದೆ. ಮಲೆನಾಡು ಪ್ರದೇಶಕ್ಕೆ ಬಂಡವಾಳ ಹೂಡಲು ಹೆದರುತ್ತಿದ್ದರು. ಆದರೆ ಶೃತಿ ಮೋಟಾರ್ಸ್ ರವರು ಧೈರ್ಯ ಮಾಡಿ ಹೊಸನಗರದಲ್ಲಿ ಮಾರುತಿ ಸುಜುಕಿ ಶೋ ರೂಂ ತೆರೆದಿದ್ದಾರೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಕಂಪನಿಗಳು ಹೊಸನಗರ ತಾಲ್ಲೂಕಿನ ಮೂಲೆ-ಮೂಲೆಗಳನ್ನು ತೆರೆಯಲಿದೆ. ಆದರೆ ನಮ್ಮ ತಾಲ್ಲೂಕಿನ ಜನರು ಯಾವುದೇ ವಸ್ತುವನ್ನು ಖರೀದಿಸಲು ಬೇರೆ ಊರಿಗೆ ಹೋಗದೇ ನಮ್ಮ ತಾಲ್ಲೂಕಿನಲ್ಲಿಯೇ ಖರೀದಿಸುವುದರಿಂದ ನಮ್ಮ ಜನರಿಗೆ ಕಡಿಮೆ ಖರ್ಚಿನಲ್ಲಿ ತಮ್ಮ ಕೈ ಹತ್ತಿರವೇ ಎಲ್ಲ ವಸ್ತುಗಳು ಸಿಗಬೇಕಾದರೆ ಪ್ರತಿಯೊಬ್ಬರು ಹೊಸನಗರ ತಾಲ್ಲೂಕಿನಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬೇಕೆಂದರು.
ಈ ಸುಜುಕಿ ಶೋರಂ ಉದ್ಘಾಟನೆಗೆ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಪ್ರಣೀಶ್, ಎಸ್‌ಬಿಐ ವ್ಯವಸ್ಥಾಪಕ ಜಯಂತ ಘೋಷ್, ಜಿ.ಟಿ ಈಶ್ವರಪ್ಪ ಗೌಡ, ಶೃತಿ ಮೋಟರ‍್ಸ್ ಎಂ.ಡಿ ಮೋಹನ್ ಡಿ.ಪಿ, ಜನರಲ್ ಮ್ಯಾನೇಜರ್ ವಿ ನಾಡಿಗೌಡ, ಸಂದೀಪ್ ಸಂಪೆಕಟ್ಟೆ, ಸಿ.ಡಿ ಅರುಣ್‌ಕುಮಾರ್ ಚಕ್ಕರ್ ನಗರ ಶಾಖೆಯ ವ್ಯವಸ್ಥಾಪಕ, ಸುನೀಲ್ ಕುಮಾರ್, ಭರತ್ ಕೆ.ಬಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.