ಹೊಸನಗರ ಹಾಲು ಉತ್ಪಾದನ ಸಂಘದಿಂದ ವಿದ್ಯಾನಿಧಿ ಯೋಜನೆ ಜಾರಿ ; ಹೆಚ್.ಜಿ. ಪ್ರವೀಣ್‌ಕುಮಾರ್

Written by Mahesha Hindlemane

Published on:

ಹೊಸನಗರ ; ಇಲ್ಲಿನ ಮಾವಿನಕೊಪ್ಪದಲ್ಲಿರುವ ಹಾಲು ಉತ್ಪಾದನ ಸಂಘದ ವತಿಯಿಂದ 2025-26ನೇ ಸಾಲಿನಿಂದ ಸಂಘದ ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ 90% ಕಿಂತಲ್ಲೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಹಾಗೂ ಧನ ಸಹಾಯ ನೀಡಲು ಸಂಘ ಮುಂದಾಗಿದೆ ಎಂದು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಹೆಚ್.ಜಿ. ಪ್ರವೀಣ್‌ಕುಮಾರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಾವಿನಕೊಪ್ಪ ಗ್ಯಾಸ್ ಸಭಾಭವನದ ಆವರಣದಲ್ಲಿ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ಸಭೆಯನ್ನು ನಡೆಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದಿನ ವರ್ಷ ಹೊಸ-ಹೊಸ ರೀತಿಯಲ್ಲಿ ನಮ್ಮ ಸಂಘ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ವರ್ಷದಲ್ಲಿ ಅತೀ ಹೆಚ್ಚು ಹಾಲು ನೀಡುವ ಸಂಘದ ಸದಸ್ಯರು ಹಾಗೂ ಸದಸ್ಯರಲ್ಲದವರಿಗೂ ಇಬ್ಬರಿಗೆ ಸನ್ಮಾನ ಮಾಡಬೇಕೆಂದು ಯೋಚಿಸಲಾಗಿದ್ದು ಇದರ ಜೊತೆಗೆ ಸಂಘದ ನಿಯಮನುಸಾರ ನೂತನ ಹಾಲು ಉತ್ಪಾದಕ ಸಹಕಾರಿ ಸಂಘದ ಮಳಿಗೆ ಸ್ಥಾಪಿಸಲು ನಿರ್ಧಾರಿಸಲಾಗಿದ್ದು ಕಾನೂನು ಪ್ರಕ್ರಿಯೆ ಮುಗಿದ ನಂತರ ನೂತನ ಬಿಲ್ಡಿಂಗ್ ನಿರ್ಮಿಸಲಾಗುವುದು ಎಂದು ಸಭೆಗೆ ತಿಳಿಸಿದ್ದು ಸಂಘದ ಎಲ್ಲ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ತಿಳಿಸಿದರು.

ಸುಮಾರು 35 ವರ್ಷಗಳ ಸುದೀರ್ಘ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭುಗೌಡರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಈಶ್ವರಪ್ಪ, ನಿರ್ದೇಶಕರಾದ ಸುರೇಂದ್ರ, ಡಿ.ಎಸ್ ಶ್ರೀಧರ, ಅಣ್ಣಪ್ಪ, ಸುಬ್ರಹ್ಮಣ್ಯ, ಸುಶೀಲಮ್ಮ, ಸುಮಿತ್ರಾ ಆರ್, ಶಿಮೂಲ್ ವಿಸ್ತಾರಣಾಧಿಕಾರಿ ನವೀನ್ ಪಶು ವೈದ್ಯಾಧಿಕಾರಿ ಶರತ್, ಕಾರ್ಯದರ್ಶಿ ದಿವ್ಯ ಕೆ ಬೃಂದಾವನ ಪ್ರವೀಣ್, ಪರೀವಿಕ್ಷಕ ದೇವರಾಜ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Comment