ತೀರ್ಥಹಳ್ಳಿ : ರಾಜ್ಯದಲ್ಲಿ ಗೋವುಗಳ ಮೇಲಿನ ವಿಕೃತಿ ಮುಂದುವರೆದಿದ್ದು, ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಪಂ ವ್ಯಾಪ್ತಿಯ ಅಗಳಬಾಗಿಲು ಗ್ರಾಮದಲ್ಲಿ ಚಂದವಳ್ಳಿಯ ಶ್ಯಾಮಣ್ಣ (ಹೂವಪ್ಪ) ಎಂಬುವರ ಮೇಯಲು ಬಿಟ್ಟದ್ದ ಗರ್ಭಿಣಿ ಹಸುವಿನ ಕುತ್ತಿಗೆಯನ್ನೇ ಕತ್ತಿಯಿಂದ ಕಡಿದ ದುಷ್ಕೃತ್ಯ ನಡೆದಿದೆ.

ದಾಳಿಯ ಏಟಿಗೆ ಹಸುವಿನ ಕುತ್ತಿಗೆಯ ಮೇಲ್ಭಾಗದ ಸುಮಾರು ಮೂರು ಇಂಚು ಆಳದಲ್ಲಿ ಮಾಂಸದ ತುಂಡು ಹಾರಿ ಹೋಗಿದ್ದು ಕುತ್ತಿಗೆ ಎಲುಬು ಕಾಣುವಂತಿದೆ. ಇದನ್ನು ನೋಡಿದ ಗ್ರಾಮಸ್ಥರು ಹಸುವಿನ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಪಶು ವೈದ್ಯರನ್ನು ಚಿಕಿತ್ಸೆ ಕೊಡಿಸಲಾಗಿದೆ.
ಮೂಕ ಪ್ರಾಣಿಗಳನ್ನು ಕಡಿದು ನೀಚತನ ಪ್ರದರ್ಶಿಸುವ ಇಂತಹ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.