ಎಸ್‌ಕೆಡಿಆರ್‌ಡಿಪಿ ಯೋಜನೆಯ ಮಹಿಳಾ ಸಂಘದ ಕಾಯವೈಖರಿ ಬಗ್ಗೆ ಅಪಪ್ರಚಾರ ; ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕಿಡಿಗೇಡಿಗಳ ವಿರುದ್ಧ ಮಹಿಳಾ ಸದಸ್ಯರಿಂದ ಠಾಣೆಗೆ ದೂರು

Written by malnadtimes.com

Published on:

HOSANAGARA ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವ-ಸಹಾಯ ಮಹಿಳಾ ಸಂಘದ ಕಾರ್ಯ ಚುಟುವಟಿಕೆ ಕುರಿತಂತೆ ಕೆಲವು ಕಿಡಿಗೇಡಿಗಳು ವಿನಃಕಾರಣ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಂಘಗಳ ಹಲವು ಮಹಿಳಾ ಸದಸ್ಯರು ಇಲ್ಲಿನ ಪೊಲೀಸ್ ಠಾಣೆಗೆ ಸೋಮವಾರ ಲಿಖಿತ ದೂರು ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now

ಈ ವೇಳೆ, ಜಿಲ್ಲಾ ಜನಜಾಗೃತಿ ವೇದಿಕೆಯ ಸಂಚಾಲಕ ಎನ್. ಆರ್. ದೇವಾನಂದ್ ಪರ್ತಕರ್ತರೊಂದಿಗೆ ಮಾತನಾಡಿ, ಸಂಘವು ಹೊಸನಗರದಲ್ಲಿ ಕಳೆದ 17 ವರ್ಷಗಳ ಹಿಂದೆ ಆರಂಭಗೊಂಡು, ಸಮಾಜಮುಖಿ ಸೇವೆ ಸಲ್ಲಿಸುತ್ತಿದೆ. ಸಂಘವು ತಾಲೂಕಿನಲ್ಲಿ ಈವರೆಗೂ ಕೋಟ್ಯಂತರ ರೂ.ಗಳ ಧನಸಹಾಯ ನೀಡಿದ್ದು, ಬಡ ಗ್ರಾಮಸ್ಥರ ಆರ್ಥಿಕ ಪ್ರಗತಿಗೆ ಕಾರಣವಾಗಿದೆ.

ಗ್ರಾಮೀಣಾಭಿವೃದ್ದಿ ಯೋಜನೆ ಸಂಘದ ನಿಲ್ಲುವಾಗಿದ್ದು ಪ್ರಸಕ್ತ ಸಾಲಿನಲ್ಲಿ ಶೇ.14ರ ಬಡ್ಡಿ ದರದಲ್ಲಿ ಸಾಲ ನೀಡಿದೆ. ಸಂಘವು ಸೇವಾನಿರತ ಚಾರಿಟೆಬಲ್ ಟ್ರಸ್ಟ್ ಆಗಿದ್ದು, ಲಾಭಾಂಶವನ್ನು ಜನಪರ ಯೋಜನೆಗಳಿಗೆ ಉಪಯೋಗಿಸುವುದು ಟ್ರಸ್ಟ್‌ನ ಮುಖ್ಯ ಗುರಿಯಾಗಿದೆ. ಸುಮಾರು 47 ಸಾವಿರ ಮಂದಿ ಈ ಸಂಘದ ಚೌಕಟ್ಟಿನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾಲಗಾರರಿಗೆ ಯಾವುದೇ ಅರ್ಜಿ ಶುಲ್ಕವನ್ನು ಸಂಘ ವಿಧಿಸುತ್ತಿಲ್ಲ. ಸಂಘದಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಬಡ ಕೂಲಿಕಾರ್ಮಿಕ ಮಹಿಳೆಯರೇ ಸದಸ್ಯರಾಗಿರುವುದು ಗಮನರ್ಹ ಸಂಗತಿ. ಸಂಘದಲ್ಲಿ ಸಾಲ ಪಡೆದ ಬಳಿಕ ಮರು ಪಾವತಿ ವೇಳೆ, ಕೆಲವು ಕಿಡಿಗೇಡಿಗಳು ಸಂಘದ ವಿರುದ್ದ ಸೂಕ್ತ ಸಾಕ್ಷಾಧಾರಗಳಿಲ್ಲದೆ ವಿನಃಕಾರಣ ಅಪಪ್ರಚಾರಕ್ಕೆ ಮುಂದಾಗಿರುವ ಸಂಗತಿ ಅಲ್ಲಲ್ಲಿ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ, ಸಂಘದ ಕೆಲವು ಮಹಿಳಾ ಸದಸ್ಯರು ಇಂದು ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹತ್ವದ ಯೋಜನೆಗಳಲ್ಲಿ ಒಂದಾದ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಸಂಘದ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುವಂತೆ ದೂರಿನಲ್ಲಿ ಅವರು ಕೋರಿದ್ದಾರೆ.

ಕೆಲವು ಭಾಗಗಳಲ್ಲಿ ಸಂಘದ ಸೇವಾ ಪ್ರತಿನಿಧಿಗಳ ಮೇಲೆ ವಿನಾಃಕಾರಣ ಕಿರಿಕ್ ಮಾಡುವ ಕಿಡಿಗೇಡಿಗಳಿಗೆ ತತಕ್ಷಣ ಕ್ರಮಕೈಗೊಳ್ಳುವ ಮೂಲಕ ಸೂಕ್ತ ರಕ್ಷಣೆ ನೀಡಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದರು.

ವೇದಿಕೆಯ ಮತ್ತೋರ್ವ ಸದಸ್ಯ, ವಕೀಲ ಮೋಹನ್ ಶೆಟ್ಟಿ ಮಾತನಾಡಿ, ಸಂಘವು ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ವರ್ಗದ ಜನರ ಹಲವು ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಆರೋಗ್ಯ, ರೈತಾಪಿ, ಶಿಕ್ಷಣ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಯಲ್ಲಿ ಬೆನ್ನೆಲುಬಾಗಿ ನಿಂತಿದೆ. ಸಂಘವು ನಬಾರ್ಡ್ ನಿಯಮದಂತೆ ಬ್ಯಾಂಕ್‌ಗಳ ಮೂಲಕ ಸಾಲ ವಿತರಿಸುತ್ತಿದ್ದು, ಗ್ರಾಮಾಭಿವೃದ್ದಿಗೆ ಇದು ಸಹಕಾರಿಯಾಗಿದೆ. ಸಾಲ ಮರು ಪಾವತಿ ವೇಳೆ ಸಾಲಗಾರರು ನಿಯಮನುಸಾರ ಹಣ ಪಾವತಿಸದೇ, ಸಂಘದ ಸಿಬ್ಬಂದಿಗಳ ವಿರುದ್ದ ಕೆಲವರು ಅನುಚಿತವಾಗಿ ವರ್ತಿಸಿರುವ ಕೆಲವು ದೂರಗಳು ಸಹ ಕೇಳಿಬಂದಿವೆ. ಇದರಿಂದ ಸಮಾಜದಲ್ಲಿ ಸಂಘದ ವಿರುದ್ದ ತಪ್ಪು ಸಂದೇಶ ಹರಡುವಂತೆ ಕೆಲವು ಕಿಡಿಗೇಡಿಗಳು ಹುನ್ನಾರ ನಡೆಸುತ್ತಿರುವುದು ಖಂಡನಾರ್ಹ ಸಂಗತಿಯಾಗಿದೆ. ಅಂತವರ ವಿರುದ್ದ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಅವರು ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯನ್ನು ವಿನಂತಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ಶಂಕರಗೌಡ ಪಾಟೀಲ, ಶೀಘ್ರದಲ್ಲಿ ಅಂತವರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಪ್ರಮುಖರಾದ ನಾರಾಯಣ ಕಾಮತ್, ಬಸವರಾಜ್ ಬಾಬಣ್ಣ ಸೇರಿದಂತೆ ಸಂಘದ ಹಲವು ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Leave a Comment