ಗನ್ ಒರೆಸುವಾಗ ಮಿಸ್ ಫೈರ್, ವ್ಯಕ್ತಿ ಸ್ಥಳದಲ್ಲೇ ಸಾ*ವು !

Written by malnadtimes.com

Published on:

CHIKKAMAGALURU | ಮನೆಯಲ್ಲಿದ್ದ ಗನ್ ಒರೆಸುವ ವೇಳೆ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಳವಾಸೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಕಳವಾಸೆ ಗ್ರಾಮದ ಅರುಣ್ (47) ಮೃತ ವ್ಯಕ್ತಿ. ಅರುಣ್ ಅವರು ತನ್ನ ಮನೆಯ ಶೆಡ್ ನಲ್ಲಿದ್ದ ಗನ್ ಒರೆಸುವ ವೇಳೆ ಏಕಾಏಕಿ ಗುಂಡು ಹಾರಿ ಬಲಕಣ್ಣನ್ನು ಹೊಕ್ಕಿದೆ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಆಗಿ ಮೃತಪಟ್ಟಿರುವುದೋ ಸ್ಪಷ್ಟವಾಗಿಲ್ಲ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿನ ಸುತ್ತ ಅನುಮಾನದ ಹುತ್ತ !

ಮೃತರನ್ನ ಆನಂದ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುರ್ಘಟನೆ ಸಂಭವಿಸಿದ್ದು ಇದು ಆತ್ಮಹತ್ಯೆಯೋ ಅಥವಾ ನಿಜಕ್ಕೂ ಮಿಸ್ ಫೈರ್ ಆಗಿ ಸಾವನ್ನಪ್ಪಿರುವುದೋ ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಲೆನಾಡಲ್ಲಿ ಕಾಡು ಪ್ರಾಣಿಗಳು ಹಾಗೂ ಕಳ್ಳ ಕಾಕರಿಂದ ಬೆಳೆ ಹಾಗೂ ಜೀವ ಉಳಿಸಿಕೊಳ್ಳಲು ಸರ್ಕಾರವೇ ಟ್ರೈನಿಂಗ್ ಹಾಗೂ ಅನುಮತಿ ನೀಡಿ ಬಂದೂಕು ಇಟ್ಟಿಕೊಳ್ಳಲು ಅನುಮತಿ ಕೊಡುತ್ತಾರೆ. ಜಿಲ್ಲೆಯ ಮಲೆನಾಡು ಭಾಗದ ಸಾವಿರಾರು ಮನೆಗಳಲ್ಲಿ ಬಂದುಗಳಿವೆ. ಕೊಳಗಾಮೆ ಗ್ರಾಮದ ಆನಂದ್ ಅವರ ಮನೆಯಲ್ಲಿ ಬಂದೂಕು ಇದ್ದು, ಶೆಡ್ಡಿನಿಂದ ಮನೆ ಒಳಗಡೆ ತೆಗೆದುಕೊಂಡು ಹೋಗಲು ಒರೆಸುವಾಗ ಮಿಸ್ ಫೈರಾಗಿ ಸಾವನ್ನಪ್ಪಿದ್ದಾರೆ ಎಂದು ದೂರು ನೀಡಿದ್ದಾರೆ.

ಆದರೆ, ಸಾಮಾನ್ಯವಾಗಿ ಬಂದೂಕು ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಯಾರೂ ಕೂಡ ಬುಲೆಟ್ ಲೋಡ್ ಮಾಡಿ ಇಟ್ಟಿರುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಬಂದೂಕು ಮನೆಯಲ್ಲಿ ಇದ್ದಾಗಲೂ ಲೋಡ್ ಮಾಡಿ ಇಟ್ಟಿದ್ದರಾ ಎಂಬ ಅನುಮಾನ ಮೂಡಿದೆ.

ಸಾಲದಕ್ಕೆ ಮೃತ ಆನಂದ್ ಅವರ ಬಲಗಣ್ಣಿನಿಂದ ಹೊಕ್ಕ ಗುಂಡು ಹಿಂದೆ ತಲೆ ಸೀಳಿ ಹೊರಬಂದಿದೆ. ಈ ಮಿಸ್ ಫೈರ್ ನಲ್ಲಿ ಸಾಕಷ್ಟು ಅನುಮಾನಗಳಿದ್ದು ಇದಕ್ಕೂ ನಿಜಕ್ಕೂ ಮಿಸ್ ಫೈರ್ ಆಗಿದ್ದಾ? ಅಥವಾ ಆತ್ಮಹತ್ಯೆಯ ಇಲ್ಲ ಯಾರಾದರೂ ಕೊಲೆ ಮಾಡಿದ್ದಾರಾ? ಎಂಬ ಎಲ್ಲಾ ಆಯಾಮಗಳಲ್ಲೂ ಮಲ್ಲಂದೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸರಿಂದ ತೀವ್ರ ತನಿಖೆ :

ಶವ ಪರೀಕ್ಷೆಗಾಗಿ ಹಾಸನದ ಮೆಡಿಕಲ್ ಕಾಲೇಜಿಗೆ ಮೃತದೇಹವನ್ನ ಕೊಂಡೊಯ್ದಿದ್ದು ಹೇಗೆ ಸಾವನ್ನಪ್ಪಿದ್ದಾರೆ ಎಂದು ವರದಿಗಾಗಿ ಕಾಯುತ್ತಿದ್ದಾರೆ. ಸೋಮವಾರ ಇಳಿ ಸಂಜೆ ಮನೆಯಲ್ಲಿ ಯಾರು ಇರಲಿಲ್ಲ. ಪತ್ನಿ ಹಾಗೂ ಮಕ್ಕಳು ಚಿಕ್ಕಮಗಳೂರು ನಗರಕ್ಕೆ ಬಂದಿದ್ದರು. ಈ ವೇಳೆ ಪತ್ನಿಗೆ ಫೋನ್ ಮಾಡಿದ್ದ ಮೃತ ಆನಂದ್ ಅವರನ್ನು ಕರೆದುಕೊಂಡು ಬರಲು ನಾನೂ ಬರುವುದಿಲ್ಲ ನೀವು ಅಣ್ಣನ ಜೊತೆ ಬನ್ನಿ ಎಂದು ಫೋನ್ ಮಾಡಿ ಹೇಳಿದ್ದರು. ಆದರೆ, ಪತ್ನಿ ಹಾಗೂ ಮಕ್ಕಳು ಮನೆಗೆ ಬಂದು ನೋಡುವಷ್ಟರಲ್ಲಿ ಆನಂದ್ ಶೆಡ್ ನಲ್ಲಿ ಸಾವನ್ನಪ್ಪಿದ್ದರು. ಪೊಲೀಸರು ಸಾವಿನ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.

Leave a Comment