ಹಳ್ಳದಲ್ಲಿ ಕೊಚ್ಚಿ ಹೋಗಿ ಮೃ*ತಪಟ್ಟಿದ್ದ ಮಹಿಳೆ ಕುಟುಂಬಕ್ಕೆ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ

Written by Mahesha Hindlemane

Published on:

HOSANAGARA | ಈ ಬಾರಿಯ ನೆರೆಹಾವಳಿ ವೇಳೆ ಕಾಲುಸಂಕ ದಾಟುವಾಗ ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ಶಿವಮೊಗ್ಗ ಜಿಲ್ಲೆಯ ತಾಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈಸೆ ಗ್ರಾಮದ ಶ್ರೀಧರಪುರ ನಿವಾಸಿ ಶಶಿಕಲಾ ಕುಟುಂಬಕ್ಕೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ 5 ಲಕ್ಷ ರೂ. ಮೌಲ್ಯದ ಪರಿಹಾರದ ಚೆಕ್ ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಬಳಿಕ ಮಾತನಾಡಿದ ಅವರು, ಶುಕ್ರವಾರ ತಾಲೂಕಿನ ಕರಿಮನೆ ಗ್ರಾಮದ ರೈತ ಎನ್.ಟಿ. ತಿಮ್ಮಪ್ಪ ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೂ ಶೀಘ್ರದಲ್ಲೇ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ವೇಳೆ ತಹಶೀಲ್ದಾರ್ ರಶ್ಮಿ, ತಾಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಕೆ.ವಿ.ಸುಬ್ರಹ್ಮಣ್ಯ, ಉಪಾಧ್ಯಕ್ಷ ನರ್ತಿಗೆ ಸುರೇಶ್, ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಹೆಬ್ಬುರಳಿ ರಮಾಕಾಂತ್, ಪ್ರಮುಖರಾದ ಬೈಸೆ ಅರುಣ್, ಶಾಸಕರ ಆಪ್ತ‌ ಕಾರ್ಯದರ್ಶಿ ಹೊದ್ಲ ಬಸವರಾಜ್, ರಾಜೇಶ್ ಹಿರಿಮನೆ, ಆನಂದ್ ಗುಡ್ಡೇಕೊಪ್ಪ, ಮಾರುತಿ, ರಮೇಶ್, ಮೃತರ ಪುತ್ರರಾದ ಸುದೀಪ್, ಸುಮಂತ್ ಹಾಗೂ ಕುಟುಂಬ ವರ್ಗ ಹಾಜರಿದ್ದರು.

Leave a Comment