ರಿಪ್ಪನ್‌ಪೇಟೆ ; ಬಹುವರ್ಷದ ಬೇಡಿಕೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸರ್ಕಾರದಿಂದ ನೆವಟೂರು ಸಂಪರ್ಕದ ಹಾನಂಬಿ ರಸ್ತೆ ಅಭಿವೃದ್ದಿಗೆ 17 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದಾರೆಂದು ಗ್ರಾಮಸ್ಥರು ಶಾಸಕರನ್ನು ಪ್ರಶಂಸಿಸಿದರು.
ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆವಟೂರು ಮೂಡಾಗಲು ಲಕ್ಕವಳ್ಳಿ ಸಂಪರ್ಕದ ಹಾನಂಬಿ ರಸ್ತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಹಾನಂಬಿ ರಸ್ತೆಗೆ ಹೊಂದಿಕೊಂಡಿರುವ ಹಲವು ಖಾತೆದಾರ ರೈತರು ಶಾಸಕರ ಬಳಿ ದೂರು ನೀಡಿ ಹೆಚ್ಚು ಅಗಲ ಮಾಡದೇ ಬಂಡಿಗಾಡಿ, ಟಿಲ್ಲರ್, ಕಾರುಗಳು ಮಾತ್ರ ಹೋಗುವಷ್ಟು ಅಗಲ ರಸ್ತೆ ಮಾಡಿ ಇನ್ನು ಹೆಚ್ಚು ಅಗಲ ಮಾಡಿದರೆ ಜಮೀನು ಕಳೆದುಕೊಳ್ಳಬೇಕಾಗುವುದೆಂದು ಹೇಳಿದಾಗ, ಶಾಸಕರು ನಿಮಗೆ ಕೃಷಿ ಉಪಕರಣಗಳನ್ನು ಸಾಗಿಸಲು ಈ ರಸ್ತೆ ನಿರ್ಮಿಸಲಾಗುತ್ತಿದೆ. ತಾವು ಸ್ವಯಂಪ್ರೇರಿತರಾಗಿ ಸಹಕಾರ ಮಾಡಬೇಕು ಈ ರೀತಿ ಮಾಡುವುದು ಸೂಕ್ತವಲ್ಲ ಎಂದು ಖಡಕ್ ವಾರ್ನ್ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿ, ಚಂದ್ರಪ್ಪ, ಬಾಳೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಶ್ರೀನಿವಾಸ ಆಚಾರ್, ಗ್ರಾಮ ಪಂಚಾಯ್ತಿ ಸದಸ್ಯರು ಪಿಡಿಓ ಮತ್ತು ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ, ಸಂತೋಷ (ಚಿಂಟು), ಬೈರಪ್ಪ, ಇನ್ನಿತರರು, ಗ್ರಾಮಸ್ಥರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.