ಹೊಸನಗರ ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಜೊತೆಗೂಡಿ ಕರ್ತವ್ಯ ನಿರ್ವಹಿಸಿರುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಶಿವಮೊಗ್ಗ ಜಿಲ್ಲೆಯ ಜನ ಜಾಗೃತಿ ವೇದಿಕೆಯಲ್ಲಿ ಕಳೆದ 11 ವರ್ಷದಿಂದ ಸದಸ್ಯರಾಗಿ ಸೇವೆ ಸಲ್ಲಿಸಿರುವ ಹೊಸನಗರ ತಾಲೂಕಿನ ಸಂಪೆಕಟ್ಟೆಯವರಾಗಿ, ವೃತ್ತಿಯಲ್ಲಿ ವಕೀಲರಾದ ಮೋಹನ್ ಜಿ ಶೆಟ್ಟಿಯವರನ್ನು ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜನಜಾಗೃತಿ ಮಾಸಿಕ ಸಭೆಯ ಮೂಲಕ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭಲ್ಲಿ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ, ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಸೊಪ್ಪುಗುಡ್ಡೆ, ನಿಕಟಪೂರ್ವ ಉಪಾಧ್ಯಕ್ಷ ಪಾಲಾಕ್ಷಪ್ಪ, ಜಿಲ್ಲಾ ಕಾರ್ಯದರ್ಶಿ ಮುರುಳೀಧರ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಪ್ರದೀಪ್.ಆರ್, ಹೊಸನಗರ ತಾಲೂಕಿನ ಜನಜಾಗೃತಿ ವೇದಿಕೆ ಸದಸ್ಯರಾದ ನಾರಾಯಣ ಕಾಮತ್, ಶಶಿಕಲಾ, ದೇವೇಂದ್ರ ಜಿ. ಹೆಚ್ ಹಾಗೂ 37 ಜನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಶಿವಮೊಗ್ಗ ಜಿಲ್ಲೆಯ ಕೋ-ಆಪ್ಟ್ ಸದಸ್ಯರು ಉಪಸ್ಥಿತರಿದ್ದರು.